ಹಳಗೇರಿ: ಉಚಿತ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಶಿಬಿರ

Update: 2021-12-27 11:18 GMT

ಹಳಗೇರಿ :  ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಕಾರ್ಡ್, ಇ-ಶ್ರಮ ಕಾರ್ಡ್ ಮತ್ತು ಮೈನಾರಿಟಿ ವಿದ್ಯಾರ್ಥಿ ವೇತನ ಶಿಬಿರವು ಜಾಮಿಯ ಮಸೀದಿ ಹಳಗೇರಿಯಲ್ಲಿ ನಡೆಯಿತು.

ಮೌಲಾನಾ ಹಸೀನುಲ್ ಹಖ್ ಕಾಸಿಮಿ (ಖತೀಬರು, ಜಾಮಿಯ ಮಸೀದಿ ಹಳಗೇರಿ) ಅವರ ಕಿರಾಅತ್ ಮೂಲಕ  ಸಮಾರಂಭವನ್ನು ಪ್ರಾರಂಭಿಸಲಾಯಿತು. ಜಿಲ್ಲಾಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಬಗ್ಗೆ ತಿಳಿಸಿದರು. ಡಾ. ತೇಜಸ್ವಿನಿ ಎ. (ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಉಡುಪಿ) ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ವಿವರಿಸಿದರು. 

ಜಿಲ್ಲಾ ಉಪಾಧ್ಯಕ್ಷರಾದ ಎಸ್. ಎಮ್. ಇರ್ಷಾದ್ ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.
ಜಿಲ್ಲಾ ಖಜಾಂಚಿ ಸಯ್ಯದ್ ಅಜ್ಮಲ್ ಶಿರೂರು ಮತ್ತು ಬೈಂದೂರು ತಾಲೂಕು ಉಪಾಧ್ಯಕ್ಷ ಮಮ್ಡು ಇಬ್ರಾಹೀಮ್ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಸದಸ್ಯ ಝೈನುಲ್ ಅಬಿದಿನ್ ಹಳಗೇರಿ, ಹಳಗೇರಿ ಓವರ್ಸೀಸ್ ಕಮಿಟಿ ಸದಸ್ಯರಾದ ಮುಸೀನ್ ಹಳಗೇರಿ, ಮುಷ್ತಾಕ್ ಹಳಗೇರಿ, ಜಾಮಿಯ ಮಸೀದಿಯ ಅಧ್ಯಕ್ಷರು ಝುಲ್ಫಿಕಾರ್ ಅಲಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಇ-ಶ್ರಮ ಕಾರ್ಡ್ ಮಾಡಿಕೊಡಲು ಮುಸೀನ್ ಹಳಗೇರಿ, ಅಬ್ದುಲ್ ಮುಸೈಫ್ ಹಳಗೇರಿ, ನಯೀಮ್ ಹಳಗೇರಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News