×
Ad

ಜಾಲಿ ಪಟ್ಟಣ ಪಂಚಾಯತ್ ಚುನಾವಣೆ: 64.58% ಮತದಾನ

Update: 2021-12-27 21:46 IST

ಭಟ್ಕಳ: ಸೋಮವಾರ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ 20 ವಾರ್ಡುಗಳ ಪೈಕಿ 13 ವಾರ್ಡುಗಳಿಗಾಗಿ ನಡೆದ ಚುನಾವಣೆಯಲ್ಲಿ ಶೇ.64.58 ರಷ್ಟು ಮತದಾನವಾಯಿತು.  

ಒಟ್ಟು20 ವಾರ್ಡುಗಳ ಪೈಕಿ 7 ವಾರ್ಡುಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 13ವಾರ್ಡುಗಳಿಗಾಗಿ ಸೋಮವಾರ ಬೆಳಗ್ಗೆಯಿಂದ ಮತದಾನ ಆರಂಭಗೊಂಡು ಸಂಜೆ 5ಗಂಟೆಗೆ ಮುಕ್ತಾಯಗೊಂಡಿತು. 

13 ವಾರ್ಡ್‍ಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್‍ನ ಎಂಟು, ಬಿಜೆಪಿಯ 7 ಮತ್ತು 20 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 35 ಅಭ್ಯರ್ಥಿಗಳ ಭವಿಷ್ಯ ನಿರ್ಣಯವಾಗಲಿದೆ. ಇಲ್ಲಿನ ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಜಾಲಿ ಪಟ್ಟಣ ಪಂಚಾಯತ್ ನಲ್ಲಿ ಹಿಡಿತ ಸಾಧಿಸಿದ್ದು 12 ಸ್ವತಂತ್ರ ಹಾಗೂ 5 ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದರ ಮೂಲಕ ಜಾಲಿ ಪಟ್ಟಣ ಪಂಚಾಯತ್ ಅಧಿಕಾರ ತನ್ನ ಕೈಯಲ್ಲಿ ಹಿಡಿದಿಟ್ಟುಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತಂಝಿಮ್ ಸಂಸ್ಥೆಯ ರಾಜಕೀಯ ಸಮಿತಿಯ ಸಂಚಾಲಕ ಮುಹಿದ್ದೀನ್ ಅಲ್ತಾಫ್ ಖರೂರಿ, ಈ ಬಾರಿಯ ಚುನಾವಣೆಯಲ್ಲಿ 20 ವಾರ್ಡ್‍ಗಳಲ್ಲಿ 12 ಸ್ವತಂತ್ರ ಅಭ್ಯರ್ಥಿಗಳಿದ್ದು ಇದರಲ್ಲಿ ತಂಝೀಮ್ ಬೆಂಬಲದೊಂದಿಗೆ ಈಗಾಗಲೆ 7ವಾರ್ಡುಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನೂ ಇಂದು ನಡೆದ ಚುನಾವಣೆಯಲ್ಲಿ 5 ತಂಝೀಮ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆಯನ್ನು ಎದುರಿಸಿದ್ದು, ಕಾಂಗ್ರೆಸ್ ಪಕ್ಷದ 5 ಅಭ್ಯರ್ಥಿಗಳಿಗೂ ಕೂಡ ತಂಝಿಮ್ ಬೆಂಬಲ ನೀಡಿದೆ. ಎಲ್ಲರೂ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ  ವಿಶ್ವಾಸವನ್ನು ಅವರು  ವ್ಯಕ್ತಪಡಿಸಿದ್ದಾರೆ.  
13 ವಾರ್ಡ್‍ಗಳಲ್ಲಿ ಬಿಜೆಪಿ ಏಳು ಮತ್ತು ಕಾಂಗ್ರೆಸ್ ಎಂಟು ವಾರ್ಡ್‍ಗಳಲ್ಲಿ ಸ್ಪರ್ಧಿಸುತ್ತಿವೆ. ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News