ಗ್ರಾಪಂ ಉಪಚುನಾವಣೆ: ಶೇ.66 ಮತದಾನ
Update: 2021-12-27 21:55 IST
ಉಡುಪಿ, ಡಿ.27: ಜಿಲ್ಲೆಯ ಮೂರು ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ಇಂದು ನಡೆದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆಯಾಗಿ ಶೇ.65.90ರಷ್ಟು ಮತದಾನದ ವರದಿಗಳು ಬಂದಿವೆ.
ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಪಂನ ಒಂದು ಸ್ಥಾನಕ್ಕೆ ನಡೆದ ಮತದಾನದಲ್ಲಿ ಶೇ.57.15ರಷ್ಟು, ಪಡುತೋನ್ಸೆಯ ಒಂದು ಸ್ಥಾನಕ್ಕೆ ಶೇ.78.36 ಹಾಗೂ ಕೋಟೆ ಪಂಚಾಯತ್‌ನ ಒಂದು ಸ್ಥಾನಕ್ಕೆ ಶೇ.62.19ರಷ್ಟು ಮತದಾನ ವಾಗಿರುವ ಬಗ್ಗೆ ವರದಿಗಳು ಬಂದಿವೆ. ಡಿ.30ರಂದು ಮತಗಳ ಎಣಿಕೆ ನಡೆಯಲಿದೆ.