ಮಹಿಳೆಯರ ದೂರದ ಪ್ರಯಾಣಕ್ಕೆ ಸಂಬಂಧಿ ಪುರುಷರು ಜತೆಗಿರಬೇಕು: ತಾಲಿಬಾನ್ ಸೂಚನೆ‌

Update: 2021-12-27 17:32 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಡಿ.27: ಮಹಿಳೆಯರು ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಿದ್ದರೆ ಅವರೊಂದಿಗೆ ನಿಕಟ ಸಂಬಂಧಿಕ ಪುರುಷರು ಇರಬೇಕು ಎಂದು ತಾಲಿಬಾನ್ ಅಧಿಕಾರಿಗಳು ರವಿವಾರ ಆದೇಶ ಜಾರಿಗೊಳಿಸಿದ್ದಾರೆ.

ಈ ಕುರಿತ ಮಾರ್ಗಸೂಚಿಯನ್ನು ಅಫ್ಘಾನಿಸ್ತಾನದ ‘ಸದ್ಗುಣ ಪ್ರಚಾರ ಮತ್ತು ದುರ್ಗುಣ ತಡೆ ಇಲಾಖೆ’ ಹೊರಡಿಸಿದ್ದು , ಇಸ್ಲಾಮ್ ಸಂಪ್ರದಾಯದಂತೆ ಹಿಜಾಬ್ ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡುವಂತೆ ವಾಹನಗಳ ಮಾಲಕರಿಗೆ ಸೂಚಿಸಿದೆ. 72 ಕಿ.ಮೀ.ಗಿಂತ ದೂರದ ಸ್ಥಳಗಳಿಗೆ ಪ್ರಯಾಣಿಸುವ ಮಹಿಳೆಯರ ಜತೆಗೆ ಸಂಬಂಧಿಕ ಪುರುಷ ಇರದಿದ್ದರೆ ಪ್ರಯಾಣಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ ಎಂದು ಇಲಾಖೆಯ ವಕ್ತಾರ ಸಾದಿಖ್ ಅಕಿಫ್ ಮುಹಾಜಿರ್ ಹೇಳಿದ್ದಾರೆ.

ಪ್ರಯಾಣದ ಸಂದರ್ಭ ವಾಹನದಲ್ಲಿ ಸಂಗೀತ ಪ್ರಸಾರ ಮಾಡಬಾರದು. ಟಿವಿ ವಾಹಿನಿಗಳಲ್ಲಿ ನಿರೂಪಕಿಯಾಗಿರುವ ಅಥವಾ ವಾರ್ತಾ ವಾಚಕರಾಗಿರುವ ಮಹಿಳೆಯರೂ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News