ಕಾಬೂಲ್: 100 ಕ್ರಿಮಿನಲ್ ಶಂಕಿತರ ಬಂಧನ

Update: 2021-12-27 17:35 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಡಿ.27: ಕಳೆದ ವಾರದಲ್ಲಿ ಸುಮಾರು 100 ಕ್ರಿಮಿನಲ್ ಶಂಕಿತರನ್ನು ಕಾಬೂಲ್‌ನಲ್ಲಿ ಬಂಧಿಸಲಾಗಿದೆ ಎಂದು ತಾಲಿಬಾನ್ ಹೇಳಿಕೆ ನೀಡಿದೆ.

ಬಂಧಿತರು ಶಸ್ತ್ರಾಸ್ತ್ರ ದರೋಡೆ ಸಹಿತ ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಶಂಕೆಯಿದ್ದು ಇವರ ಮಾಹಿತಿಯನ್ನು ಸಂಬಂಧಿತ ನ್ಯಾಯಾಧಿಕಾರಿಗಳ ಕಚೇರಿಗೆ ತನಿಖೆಗಾಗಿ ರವಾನಿಸಲಾಗಿದೆ. ಇಸ್ಲಾಮಿಕ್ ಎಮಿರೇಟ್ಸ್ ನ ಪಡೆಗಳು ದೇಶದ ಜನತೆಗೆ ಭದ್ರತೆ ಒದಗಿಸಲು 24 ಗಂಟೆಯೂ ಕಾರ್ಯ ನಿರ್ವಹಿಸುವುದಾಗಿ ನಾವು ಭರವಸೆ ನೀಡುತ್ತೇವೆ ಎಂದು ಕಾಬೂಲ್ ಭದ್ರತಾ ಇಲಾಖೆಯ ವಕ್ತಾರ ಗೆನ್ ಮೊಬಿನ್ ಹೇಳಿದ್ದಾರೆ. ದೇಶದಲ್ಲಿ ಬಡತನ ಮತ್ತು ಹಸಿವಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಕ್ರಿಮಿನಲ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಲಿದೆ ಎಂದು ಮಿಲಿಟರಿ ತಜ್ಞ ಅಸಾದುಲ್ಲಾ ನದೀಮ್ ಅಭಿಪ್ರಾಯಪಟ್ಟಿರುವುದಾಗಿ ಟೋಲೋ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಕಿರುಕುಳ ಪ್ರಕರಣಗಳಲ್ಲಿ ಶಾಮೀಲಾದವರು ಸೇರಿದಂತೆ, ಭದ್ರತಾ ಪಡೆಯ 1,895 ಸದಸ್ಯರನ್ನು ಉಚ್ಛಾಟಿಸಲಾಗಿದೆ ಎಂದು ಕಳೆದ ವಾರ ಭದ್ರತಾ ಪಡೆಗಳ ಪರಿಶೋಧನಾ ಆಯೋಗದ ಮುಖ್ಯಸ್ಥರು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News