×
Ad

ಫಿಲಿಪ್ಪೀನ್ಸ್: ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 388ಕ್ಕೆ ಏರಿಕೆ

Update: 2021-12-27 23:20 IST
ಸಾಂದರ್ಭಿಕ ಚಿತ್ರ

ಮನಿಲಾ, ಡಿ.27 : ದ್ವೀಪರಾಷ್ಟ್ರ ಫಿಲಿಪ್ಪೀನ್ಸ್‌ಗೆ ಡಿ.16 ಮತ್ತು 17ರಂದು ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದ ಉಂಟಾದ ಸಾವಿನ ಪ್ರಮಾಣ ನಿರಂತರ ಹೆಚ್ಚುತ್ತಿದ್ದು 388ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಯ್ ಚಂಡಮಾರುತ ಫಿಲಿಪ್ಪೀನ್ಸ್‌ನ ಮಧ್ಯಪೂರ್ವ ಭಾಗಗಳಿಗೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಚಂಡಮಾರುತದಿಂದ ಹಲವು ಮರಗಳು ಉರುಳಿಬಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿತ್ತು. ಜತೆಗೆ ಭೀಕರ ಪ್ರವಾಹದ ಸ್ಥಿತಿಯಿಂದ ಜನತೆ ಕಂಗೆಟ್ಟಿದ್ದರು.

ಚಂಡಮಾರುತದಿಂದ ಮೃತರ ಸಂಖ್ಯೆ 388ಕ್ಕೇರಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಇತರ 60 ಮಂದಿ ನಾಪತ್ತೆಯಾಗಿದ್ದಾರೆ. 4 ಮಿಲಿಯನ್‌ಗೂ ಹೆಚ್ಚು ಮಂದಿ ಚಂಡಮಾರುತ ನೆರವು ನಿಧಿಯಿಂದ ಸಹಾಯ ಪಡೆದಿದ್ದಾರೆ. 4,82,000 ಮನೆಗಳಿಗೆ ಹಾನಿಯಾಗಿದೆ. 3 ಲಕ್ಷಕ್ಕೂ ಅಧಿಕ ಮಂದಿ ಪರಿಹಾರ ಶಿಬಿರದಲ್ಲಿ ನೆಲೆಸಿದ್ದರೆ, 2 ಲಕ್ಷಕ್ಕೂ ಅಧಿಕ ಜನ ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ನಾಗರಿಕ ರಕ್ಷಣಾ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News