ಮ್ಯಾನ್ಮಾರ್: ಆಂಗ್ ಸಾನ್ ಸೂಕಿ ಪ್ರಕರಣದ ತೀರ್ಪು ಮತ್ತೆ ಮುಂದೂಡಿಕೆ

Update: 2021-12-27 17:57 GMT
ಆಂಗ್ ಸಾನ್ ಸೂಕಿ 

ಯಾಂಗಾನ್, ಡಿ.27: ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧದ ಪ್ರಕರಣದ ತೀರ್ಪು ಪ್ರಕಟಿಸುವುದನ್ನು ಮ್ಯಾನ್ಮಾರ್ ನ ಸೇನಾ ನ್ಯಾಯಾಲಯ ಮತ್ತೊಮ್ಮೆ ವಿಳಂಬಿಸಿದ್ದು ಜನವರಿ 10ಕ್ಕೆ ಮುಂದೂಡಿದೆ.

ಅಕ್ರಮವಾಗಿ ವಾಕಿ ಟಾಕಿ ಆಮದು ಮಾಡಿಕೊಂಡಿರುವುದು ಮತ್ತು ಬಳಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಡಿಸೆಂಬರ್ 27ರಂದು ಪ್ರಕಟವಾಗಬೇಕಿದ್ದ ತೀರ್ಪನ್ನು ನ್ಯಾಯಾಲಯ ಜನವರಿ 10ಕ್ಕೆ ಮುಂದೂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ , ಸೇನೆಯ ವಿರುದ್ಧ ಪ್ರತಿಭಟಿಸಲು ಜನರನ್ನು ಪ್ರಚೋದಿಸಿದ ಮತ್ತು ಕೊರೋನ ನಿರ್ಬಂಧವನ್ನು ಉಲ್ಲಂಘಿಸಿದ ಆರೋಪದಲ್ಲಿ ಸೂಕಿಗೆ ಸೇನಾ ನ್ಯಾಯಾಲಯ 4 ವರ್ಷ ಜೈಲುಶಿಕ್ಷೆ ವಿಧಿಸಿದೆ. ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯಲ್ಲಿ ಸರಕಾರವನ್ನು ವಜಾಗೊಳಿಸಿದ್ದ ಸೇನೆ ಅಧಿಕಾರ ಕೈವಶ ಮಾಡಿಕೊಂಡಿದ್ದು ಅಂದಿನಿಂದ ಸೂಕಿ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News