×
Ad

ಎಸ್ ಡಿಪಿಐ ಪ್ರತಿಭಟನೆ ಮುಂದೂಡಿಕೆ

Update: 2021-12-28 14:57 IST

ಉಳ್ಳಾಲ:  ಡಿ.29 ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಯನ್ನು ತಾತ್ಕಾಲಿಕ ವಾಗಿ ಮುಂದೂಡಲಾಗಿದೆ  ಎಂದು ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿರೋಡ್  ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ಫೋಸಿಸ್ ಜನ ವಿರೋಧಿ ನೀತಿ ವಿರೋಧಿಸಿ ಡಿ.29ರಂದು ಬೆಳಿಗ್ಗೆ 10 ಗಂಟೆ ಗೆ ಇನ್ಫೋಸಿಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪಜೀರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲೆದೋರಿರುವ ದಾರಿ ದೀಪ ಸಮಸ್ಯೆ ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ ವಿ. ರಾಜೇಂದ್ರ ರವರು  ಜನವರಿ 15ರೊಳಗೆ ಇನ್ಫೋಸಿಸ್ ಸಂಸ್ಥೆಯನ್ನು ಸೇರಿಸಿ ಸಭೆ ನಡೆಸುವ ಮೂಲಕ ದಾರಿದೀಪ ಸಮಸ್ಯೆ ಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ  ಡಿ.29 ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು  ವಾಪಸ್ ಪಡೆಯಲಾಗಿದ್ದು, ತಾತ್ಕಾಲಿಕ ವಾಗಿ ಮುಂದೂಡಲಾಗಿದೆ  ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ  ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ, ಉಪಾಧ್ಯಕ್ಷ ರವಿ ಕುಟಿನ್ಹ, ಕಾರ್ಯದರ್ಶಿ ಝಾಹಿದ್ ಮಲಾರ್ , ಸದಸ್ಯ ಅಬ್ದುಲ್ ಲತೀಫ್ ಕೋಡಿಜಾಲ್,ಪಜೀರ್ ಗ್ರಾ.ಪಂ.ಸದಸ್ಯರಾದ ಸಿರಾಜ್ ಅರ್ಕಾಣ, ಶಫೀಕ್ ಅರ್ಕಾಣಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿರೋಡ್, ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಕೋಟೆಪುರ, ಪಜೀರ್ ಗ್ರಾಮ ಸಮಿತಿ ಅಧ್ಯಕ್ಷ ಆಸಿಫ್ ಪಜೀರ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News