ಮೆಹೆಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್ ಪ್ರಕರಣ : ಎಪಿಸಿಆರ್ ನಿಯೋಗ ಭೇಟಿ
ಕೋಟ, ಡಿ.28: ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ನುಗ್ಗಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ವೆಸಗಿದ ಮನೆಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಜಿಲ್ಲಾ ನಿಯೋಗ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿತು.
ನಿಯೋಗವು ಲಾಠಿಚಾರ್ಜ್ ದೌರ್ಜನ್ಯಗೊಳಗಾದ ಸಂತ್ರಸ್ಥರ ಬಳಿ ಘಟನೆಯ ವಿವರಣೆಯನ್ನು ಪಡೆದುಕೊಂಡಿತು. ಘಟನೆಯಲ್ಲಿ ಮದುಮಗ ಸೇರಿದಂತೆ ವೃದ್ದರು ಮಹಿಳೆಯರು, ಮಕ್ಕಳು ಗಾಯಗೊಂಡಿರುವುದು ಗಮನಕ್ಕೆ ಬಂದಿರುವುದಾಗಿ ನಿಯೋಗ ತಿಳಿಸಿದೆ.
ಪೊಲೀಸರ ದೌರ್ಜನ್ಯದ ಸಾಕ್ಷ್ಯ ದಾಖಲೀಕರಣ ಮಾಡಿ ರಾಜ್ಯ ಮಾನವ ಹಕ್ಕು ಆಯೋಗ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಈ ಸಂದರ್ಭದಲ್ಲಿ ನಿ.ಓಗ ತಿಳಿಸಿತು. ಅಲ್ಲದೇ ದೌರ್ಜನ್ಯಕ್ಕೊಳಗಾಗದ ಕುಟುಂಬಕ್ಕೆ ಪರಿಹಾರ ನೀಡಲು ಸರಕಾರವನ್ನು ಆಗ್ರಹಿಸಿದೆ.
ಈ ನಿಯೋಗದಲ್ಲಿ ಹಸನ್ ಮಾವಡ್, ಇದ್ರಿಸ್ ಹೂಡೆ, ಸಾಲಿಡಾರಿಟಿಯ ಯಾಸೀನ್ ಕೋಡಿಬೆಂಗ್ರೆ ಮತ್ತು ಇಬ್ರಾಹಿಮ್ ಸಯೀದ್ ಉಪಸ್ಥಿತರಿದ್ದರು.