ಜ.4ರಿಂದ ಕ್ರೀಡಾ ಶಾಲೆ, ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ
ಮಂಗಳೂರು, ಡಿ.28: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2022-23ನೇ ಸಾಲಿಗೆ ಕ್ರೀಡಾಶಾಲೆ ಹಾಗೂ ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ (ಬಾಲಕರು, ಬಾಲಕಿಯರು) ಆಯ್ಕೆ ಪ್ರಕ್ರಿಯೆಯು 2022ರ ಜ.4ರಿಂದ ನಡೆಯಲಿದೆ.
ಜ.4ರಂದು ಬೆಳಗ್ಗೆ 10ಕ್ಕೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು,ಜ.5ರ ಬೆಳಗ್ಗೆ 10ಕ್ಕೆ ಪುತ್ತೂರು ತಾಲೂಕು ಕ್ರೀಡಾಂಗಣ ಕೊಂಬೆಟ್ಟು, ಜ.6ರ ಬೆಳಗ್ಗೆ 10ಕ್ಕೆ ಬಂಟ್ವಾಳ ತಾಲೂಕಿನ ವಿಟ್ಲ ಸರಕಾರಿ ಪ್ರೌಢಶಾಲೆಯ ಮೈದಾನ, ಜ.7ರ ಬೆಳಗ್ಗೆ 10ಕ್ಕೆ ಬೆಳ್ತಂಗಡಿ ತಾಲೂಕಿನ ಸರಕಾರಿ ಪೂಂಜಾಲಕಟ್ಟೆ ಪ್ರೌಢಶಾಲೆಯ ಮೈದಾನ, ಜ.10ರ ಬೆಳಗ್ಗೆ 10ಕ್ಕೆ ಮೂಡುಬಿದಿರೆ ತಾಲೂಕಿನ ಸ್ವರಾಜ್ ಮೈದಾನ, ಜ.12ರ ಬೆಳಗ್ಗೆ 10ಕ್ಕೆ ಕಡಬ ತಾಲೂಕಿನ ನೂಜಿಬಾಳ್ತಿಲ ಬೆಥನಿ ಪಪೂ ಕಾಲೇಜು, ಜ.14ರ ಬೆಳಗ್ಗೆ 10ಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ.
ಆಯ್ಕೆ ಸಂದರ್ಭ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕ. ಹೆಚ್ಚಿನ ಮಾಹಿತಿಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ಕಚೇರಿ ದೂ.ಸಂ : 0824-2451264ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.