ಡಿ.30: ಮಂಗಳೂರಿನಲ್ಲಿ 'ಮೀಫ್' ವತಿಯಿಂದ ಶೈಕ್ಷಣಿಕ ಕಾರ್ಯಾಗಾರ
ಮಂಗಳೂರು, ಡಿ. 28: ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ ಫೆಡರೇಶನ್ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ (ಕಲಿಸುವ ವಿಧಾನ ಮತ್ತು ಪ್ರೇರಣೆ ಹಾಗೂ ಕೌಶಲ ನಾಯಕತ್ವ) ಮತ್ತು ಮೀಫ್ ಮ್ಯಾನೇಜ್ಮೆಂಟ್ ಸಮ್ಮಿಲನವು ಡಿ.30ರಂದು ಬೆಳಗ್ಗೆ 9:15ಕ್ಕೆ ಅಡ್ಯಾರ್ ನಲ್ಲಿರುವ ಬರಖ್ಹಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಾರ್ಯಾಗಾರವನ್ನು ಮಂಗಳೂರು ದಕ್ಷಿಣ ವಲಯ ಬಿಇಒ ರಾಜಲಕ್ಷ್ಮಿ ಉದ್ಘಾಟಿಸಲಿದ್ದು, 'ಮೀಫ್' ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರ ಪ್ರೊ. ರಾಜೇಂದ್ರ ಭಟ್ ಭಾಗವಹಿಸಲಿದ್ದಾರೆ. ಅತಿಥಿಯಾಗಿ ಬರಖ್ಹಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬಜ್ಪೆ ಭಾಗವಹಿಸಲಿದ್ದಾರೆ.
ಬಳಿಕ ಮೀಫ್ ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಅಧ್ಯಕ್ಷತೆಯಲ್ಲಿ ನಡೆಯುವ ಮೀಫ್ ಆಡಳಿತ ಸಮಿತಿಯ ಸಭೆಯಲ್ಲಿ ಮೀಫ್ ಜೊತೆ ಕಾರ್ಯದರ್ಶಿ ಪಿ.ಎ.ಇಲ್ಯಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅಪರಾಹ್ನ ನಡೆಯುವ ನಾಯಕತ್ವ ಶಿಬಿರದಲ್ಲಿ ಮಂಗಳೂರಿನ ತರಬೇತುದಾರೆ ನಸ್ರೀನ್ ಬಿಂತ್ ಅಹ್ಮದ್ ಬಾವಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯ ಬಿಇಒ ಎಂ.ಪಿ.ಜ್ಞಾನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, 'ಮೀಫ್' ಪೂರ್ವ ವಲಯ ಉಪಾಧ್ಯಕ್ಷ ಕೆ.ಎಂ. ಮುಸ್ತಫಾ ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.