×
Ad

ಅಭೀಷ್‌ನಲ್ಲಿ ಮನೆ ಖರೀದಿಗೆ ಶೇ.100 ಹಣಕಾಸು ಸೌಲಭ್ಯ

Update: 2021-12-28 23:08 IST

ಮಂಗಳೂರು, ಡಿ.28: ರಿಯಲ್ ಎಸ್ಟೇಟ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಗ್ರಾಹಕರು ಅಭೀಷ್ ಸ್ಕ್ವೇರ್ ವಸತಿ ಸಮುಚ್ಚಯದಲ್ಲಿ ಮನೆ ಖರೀದಿಯ ವೇಳೆ ಶೇ.100ರಷ್ಟು ಹಣಕಾಸು ಸೌಲಭ್ಯವನ್ನು ಡಿ.29ರಿಂದ ಜನವರಿ 2ರವರೆಗೆ ನೀಡಲು ತೀರ್ಮಾನಿಸಲಾಗಿದೆ.

ಹಣಕಾಸು ಹೊಂದಾಣಿಕೆ ಮಾಡಲು ಕಷ್ಟವಾಗುವ ಗ್ರಾಹಕರಿಗೆ ಪೂರಕವಾಗಿ ಡೌನ್‌ಪೇಮೆಂಟ್‌ನ್ನು ಅಭೀಷ್ ಸಂಸ್ಥೆಯೇ ಗ್ರಾಹಕರಿಗೆ ನೀಡುತ್ತಿದೆ. ಈ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಇತಿಹಾಸ ಬರೆಯಲು ಅಭೀಷ್ ಸಂಸ್ಥೆಯು ಮುಂದಾಗಿದೆ. ಇದೊಂದು ರಿಯಲ್ ಎಸ್ಟೇಟ್ ಉದ್ಯಮದ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ಹೊಸ ವರ್ಷದಂದು ಹಲವು ಸಂಕಲ್ಪಗಳು ಇರುತ್ತವೆ. ಅದರಲ್ಲಿ ಮನೆ ಖರೀದಿಯೂ ಒಂದಾಗಿರುತ್ತದೆ. ಆದರೆ ಹಣಕಾಸಿನ ಹೊಂದಾಣಿಕೆ ಕೊರತೆಯಿಂದ ಅದೆಷ್ಟೋ ಮಂದಿಯ ಕನಸು ನನಸಾಗಿರುವುದಿಲ್ಲ. ಆದರೆ ಈ ವರ್ಷ ಕನಸು ನನಸಾಗಿಸುವ ಕ್ಷಣವನ್ನು ಅಭೀಷ್ ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದೆ ಎಂದು ಪುಷ್ಪರಾಜ್ ಜೈನ್ ತಿಳಿಸಿದರು.

ಶೇ.100 ಹಣಕಾಸು ಸೌಲಭ್ಯ

ಮನೆ ಖರೀದಿ ಮಾಡುವ ವೇಳೆ ಮೊದಲ ಸಮಸ್ಯೆ ಬರುವುದೇ ಹಣಕಾಸು ಕ್ರೋಢೀಕರಣ. ಆದರೆ ಇಲ್ಲಿ ಗ್ರಾಹಕರು ಖರೀದಿ ಮಾಡುವ ವೇಳೆ ಹಣಕಾಸು ಕ್ರೋಢೀಕರಣದ ಸಮಸ್ಯೆಯೇ ಬರುವುದಿಲ್ಲ. ಕೇವಲ ದಾಖಲೆಗಳೊಂದಿಗೆ ತೆರಳಿದರೆ ಪೂರ್ಣ ಹಣಕಾಸು ಸೌಲಭ್ಯವನ್ನು ಮಾಡಿಕೊಡಲಾಗುವುದು.

ಗ್ರಾಹಕರಿಗೆ ಸ್ಥಳದಲ್ಲೇ ಶೇ.100 ಹಣಕಾಸು ಸೌಲಭ್ಯ ಮಂಜೂರು ಮಾಡಲಾಗುವುದು. ಶೇ. 80ರಷ್ಟು ಗೃಹ ಸಾಲ ಸ್ಥಳದಲ್ಲೇ ಮಂಜೂರು ಮಾಡಿದರೆ ಉಳಿದ ಶೇ.20ರಷ್ಟು ಮೊತ್ತವನ್ನು ಅಭೀಷ್ ಸಂಸ್ಥೆ ವ್ಯವಸ್ಥೆ ಮಾಡಲಿದೆ. ಗ್ರಾಹಕರು ಬರುವ ವೇಳೆ ಕೆವೈಸಿ ದಾಖಲೆ ಪತ್ರ ಮತ್ತು ಆದಾಯ ಸಂಬಂಧಿ ದಾಖಲೆ ತರಬೇಕು. ಉದ್ಯೋಗಿಗಳು ಆರು ತಿಂಗಳ ವೇತನ ಪ್ರಮಾಣ ಪತ್ರ ಹಾಗೂ ಇತರರು ಮೂರು ವರ್ಷದ ಐಟಿ ರಿಟರ್ನ್ಸ್ ತರಬೇಕು.

ಮಂಗಳೂರಿನ ಕೆಪಿಟಿ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಂದರೆ ಮೂರು ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಗರವನ್ನು ಸಂಪರ್ಕಿಸುವಲ್ಲೇ ಅಭೀಷ್ ಸ್ವ್ಕೇರ್ ನಿರ್ಮಾಣವಾಗುತ್ತಿದೆ. ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭೀಷ್ ಸ್ವ್ಕೇರ್‌ನಲ್ಲಿ ಇದೀಗ ಗ್ರಾಹಕರು ಶೇ.100 ಹಣಕಾಸು ನೆರವಿನೊಂದಿಗೆ ಮನೆ ಬುಕ್ ಮಾಡಬಹುದಾಗಿದೆ.

ಈಗಾಗಲೇ ಅಭೀಷ್ ಸ್ವ್ಕೇರ್‌ನ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಐದು ಮಹಡಿಗಳು ಪೂರ್ಣಗೊಂಡಿವೆ. 2023ರ ಸೆಪ್ಟೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದ್ದು, ಗ್ರಾಹಕರಿಗೆ ಮನೆ ಹಸ್ತಾಂತರ ಮಾಡಲಾಗುವುದು.

ಆದುದರಿಂದ ಗ್ರಾಹಕರಿಗೆ ಮನೆ ಖರೀದಿ ಮಾಡಿ ಕಾಯುವ ಅವಶ್ಯಕತೆಯೂ ಇಲ್ಲ. ಅಭೀಷ್ ಸ್ಕ್ವೇರ್‌ನ ಬಹುತೇಕ ಮನೆಗಳು ಕಳೆದ ಭಾರಿ ವಿಶೇಷ ಮಾಸಿಕ ಕಂತು ಯೋಜನೆ ಘೋಷಣೆಯ ವೇಳೆ ಮಾರಾಟವಾಗಿದ್ದು, ಸೀಮಿತ ಮನೆಗಳು ಮಾತ್ರ ಬಾಕಿ ಇವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಬುಕ್ಕಿಂಗ್ ?: ಗ್ರಾಹಕರು ಮನೆಗಳನ್ನು ಬುಕ್ ಮಾಡಲು ಯೆಯ್ಯಾಡಿ ಸಮೀಪದ ಸೈಟ್‌ಗೆ ಭೇಟಿ ನೀಡಬೇಕು. ಇಲ್ಲಿ ಅಭೀಷ್‌ನ ತಾಂತ್ರಿಕ ತಂಡ ಹಾಗೂ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು ಸ್ಥಳದಲ್ಲೇ ಇರುತ್ತಾರೆ. ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನು ಖಚಿತ ಪಡಿಸಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಕಟ್ಟಡ ವಿನ್ಯಾಸ ಸಹಿತ ಎಲ್ಲಾ ವಿಚಾರಗಳಲ್ಲೂ ಬದ್ಧತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಸಂಸ್ಥೆಯು ಗುಣಮಟ್ಟದ ನಿರ್ಮಾಣಕ್ಕಾಗಿ ಸಂಸ್ಥೆಗೆ ಕ್ರೆಡಾಯ್ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.

ಅಭೀಷ್‌ನ ವಿಶೇಷತೆ
*10 ಲೆವೆಲ್‌ನಲ್ಲಿ 100 ಫ್ಲ್ಯಾಟ್
*3 ಲೆವೆಲ್‌ನ ಪಾರ್ಕಿಂಗ್ ಸೌಲಭ್ಯ
*ಚತುಷ್ಪಥ ಕಾಂಕ್ರಿಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ
*ನಗರದ ಪ್ರೈಮ್ ಲೋಕೇಶನ್‌ನಲ್ಲಿ ನಿರ್ಮಾಣ
*ರಾಷ್ಟ್ರೀಯ ಹೆದ್ದಾರಿ 75 ಹಾಗೂ 66ಕ್ಕೆ ಸುಲಭದಲ್ಲಿ ಸಂಪರ್ಕ
*ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ
*ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ
*ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ
*ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್
*ಪಾರ್ಟಿ ಹಾಲ್
*ಚಿಲ್ಡ್ರನ್ ಪ್ಲೇ ಏರಿಯಾ
*ವಾಕಿಂಗ್ ಟ್ರ್ಯಾಕ್
*ಅತಿಥಿಗಳು ಹಾಗೂ ಮಾಲಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್
*ಅತ್ಯಾಧುನಿಕ ಸೌಲಭ್ಯದೊಂದಿಗೆ ಪರಿಸರ ಸ್ನೇಹಿ ಯೋಜನೆ
*ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ
*ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತವಾದ ಫ್ಲ್ಯಾಟ್
*ಪ್ರಧಾನಮಂತ್ರಿ ಆವಾಜ್ ಸ್ಕೀಂ ಯೋಜನೆಯಡಿ 2.30 ಲಕ್ಷ ರೂ.ವರೆಗೆ ಸಹಾಯಧನ ಲಭ್ಯ
*ಷರತ್ತಿಗೆ ಒಳಪಟ್ಟು ಮರು ಖರೀದಿ ಆಫರ್
*ವಿಶೇಷ ದರ
700 ಚ.ಅ 1 ಬಿಎಚ್‌ಕೆ ಫ್ಲ್ಯಾಟ್ ದರ 32 ಲಕ್ಷ ರೂ.
755 ಚ.ಅ 1 ಬಿಎಚ್‌ಕೆ ಫ್ಲ್ಯಾಟ್ ದರ 34 ಲಕ್ಷ ರೂ.
1005 ಚ.ಅ 2 ಬಿಎಚ್‌ಕೆ ಫ್ಲ್ಯಾಟ್ ದರ 44 ಲಕ್ಷ ರೂ.
1035 ಚ.ಅ 2 ಬಿಎಚ್‌ಕೆ ಫ್ಲ್ಯಾಟ್ ದರ 45 ಲಕ್ಷ ರೂ.
1060 ಚ. ಅ 2 ಬಿಎಚ್‌ಕೆ ಫ್ಲ್ಯಾಟ್‌ದರ 46 ಲಕ್ಷ ರೂ.
1100 ಚ. ಅ 2 ಬಿಎಚ್‌ಕೆ ಫ್ಲ್ಯಾಟ್ ದರ 48 ಲಕ್ಷ ರೂ.
1115 ಚ. ಅ 2 ಬಿಎಚ್‌ಕೆ ಫ್ಲ್ಯಾಟ್‌ದರ 49 ಲಕ್ಷ ರೂ.
1160 ಚ.ಅ 2 ಬಿಎಚ್‌ಕೆ ಫ್ಲ್ಯಾಟ್‌ದರ 51 ಲಕ್ಷ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News