ಕೆ.ಎಸ್.ಸಿ.ಸಿ. ನ್ಯಾಷನಲ್ ಫುಟ್ಬಾಲ್ ಲೀಗ್; ಆರೋಮ ರೆಸಾರ್ಟ್ ಮಟ್ಟನ್ನೂರ್ ಚಾಂಪಿಯನ್

Update: 2021-12-28 17:58 GMT

ದುಬೈ: ರಾಷ್ಟ್ರೀಯ ಸೋಕರ್ ಲೀಗ್ 2021 ಫುಟ್‌ಬಾಲ್ ಪಂದ್ಯಾಟವು ದುಬೈನ ಅಲ್ ಅವೀರ್‌ ಶಬಾಬ್ ಅಲ್ ಅಹ್ಲಿ ಸ್ಟೇಡಿಯಂನಲ್ಲಿ ಕರ್ನಾಟಕ ಸ್ಪೊರ್ಟ್ ಮತ್ತು ಕಲ್ಚರಲ್ ಕ್ಲಬ್ ಪ್ರಾಯೋಜಕದಲ್ಲಿ ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಸಹಕಾರದಿಂದ ಇತ್ತೀಚೆಗೆ ನಡೆಯಿತು.

"30 x30 ದುಬೈ ಫಿಟ್‌ನೆಸ್ ಚಾಲೆಂಜ್" ಪ್ರಯುಕ್ತ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೂಮ್ ಅವರ "50 ನೇ ಸಂಭ್ರಮಾಚರಣೆ" ಅಡಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಚನೆಯ 50 ವರ್ಷಗಳನ್ನು ಆಚರಿಸುವ  ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮವು ಯುಎಇ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗಿ ನಂತರ ಪ್ರಾಸ್ತಾವಿಕ ಭಾಷಣ ಕಾರ್ಯಕ್ರಮ ನಡೆಯಿತು. "ನ್ಯಾಷನಲ್ ಸೋಕರ್ ಲೀಗ್ ಟ್ರೋಫಿ 2021" ಅನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ವಿವಿಧ ರೀತಿಯ 39 ಆಟಗಳಲ್ಲಿ 24 ತಂಡಗಳು ಭಾಗವಹಿಸಿದ್ದವು. ಅರೋಮಾ ರೆಸಾರ್ಟ್ ಮಟ್ಟನ್ನೂರು ಮತ್ತು ಅಮಿಗೋಸ್ ಬರ್ಶಾ ಎಫ್‌ಸಿ ನಡುವಿನ ರೋಚಕ ಅಂತಿಮ ಪಂದ್ಯದಲ್ಲಿ ಅರೋಮಾ ರೆಸಾರ್ಟ್ ಮಟ್ಟನ್ನೂರ್ (2-0) ಗೋಲುಗಳ ಮೂಲಕ ಜಯಗಳಿಸಿತು.

ಟ್ರೋಫಿಗಳು ಮತ್ತು ಪದಕಗಳನ್ನು ಸೆಮಿ-ಫೈನಲಿಸ್ಟ್‌ಗಳು, ಅತ್ಯುತ್ತಮ ಗೋಲ್‌ಕೀಪರ್, ಪಂದ್ಯಾವಳಿಯ ಆಟಗಾರರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೀರ್ಪುಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವಾನ್ವಿತ ಗಣ್ಯರಿಗೆ ಗೌರವ ಅತಿಥಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ರನ್ನರ್ ಅಪ್ ಟ್ರೋಫಿ ಮತ್ತು ನಗದು ಬಹುಮಾನವನ್ನು ಅಮಿಗೋಸ್ ಬರ್ಶಾ ಎಫ್‌ಸಿಗೆ ನಮ್ಮ ಗೌರವ ಅತಿಥಿ ಮೆರಾಜ್ ಅಹ್ಮದ್ ಅವರು ನೀಡಿದರು. ವಿಜೇತ ತಂಡಕ್ಕೆ ವಿನ್ನರ್ಸ್ ಟ್ರೋಫಿ ಮತ್ತು ನಗದು ಬಹುಮಾನವನ್ನು ಸಮಾರಂಭದ ಮುಖ್ಯ ಅತಿಥಿ ಮುಶ್ಫಿಕ್ ಉರ್ ರಹ್ಮಾನ್ ನೀಡಿದರು.

ಈ ಸಂದರ್ಭದಲ್ಲಿ ಕೆ.ಎಸ್.ಸಿ.ಸಿ. ಕ್ಲಬ್ ಮ್ಯಾನೇಜರ್ ಮೊಹಮ್ಮದ್ ಶಾಫಿ ಮತ್ತು ಕೆ.ಎಸ್.ಸಿ.ಸಿ. ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News