×
Ad

ಮರ್ದಾಳ: ಚೂರಿ ಇರಿತದಿಂದ ಓರ್ವ ಗಂಭೀರ

Update: 2021-12-29 09:39 IST

ಕಡಬ, ಡಿ.29: ಚೂರಿ ಇರಿತಕ್ಕೆ ಒಳಗಾಗಿ ರಬ್ಬರ್ ಟ್ಯಾಪರ್ ತೀವ್ರ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಕಡಬ ಸಮೀಪದ ಮರ್ದಾಳದಲ್ಲಿ ನಡೆದಿರುವುದು ವರದಿಯಾಗಿದೆ.

ಗಾಯಾಳುವನ್ನು ಮೂಲತಃ ಕೇರಳದ ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ  ಆರೋಪಿ, ಸ್ಥಳೀಯ ನಿವಾಸಿ ರಬ್ಬರ್ ಟ್ಯಾಪರ್ ಶಿವಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಪ್ರಸಾದ್ ರಿಗೆ ಆರೋಪಿ ಶಿವಪ್ರಸಾದ್ ಚೂರಿಯಿಂದ ಇರಿದಿದ್ದಾನೆನ್ನಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News