×
Ad

ಮಂಗಳೂರು ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ನ್ಯಾ. ಅಬ್ದುಲ್ ನಝೀರ್ ರಿಂದ ಶಿಲಾನ್ಯಾಸ

Update: 2021-12-29 10:34 IST

ಮಂಗಳೂರು,  ಡಿ.29: ನಗರದ ಹ್ಯಾಟ್ ಹಿಲ್ ಬಳಿ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ (ಬ್ಲಾಕ್-ಬಿ)  ಸುಪ್ರೀಂ ಕೋಟ್೯ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಬುಧವಾರ ಬೆಳಗ್ಗೆ ಶಿಲಾನ್ಯಾಸ  ನೆರವೇರಿಸಿದರು.

ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ್, ಹೈಕೋರ್ಟ್ ನ ನ್ಯಾಯಮೂರ್ತಿ ಮುಹಮ್ಮದ್ ನವಾಝ್, ಹೈಕೋರ್ಟ್ ನ ರಿಜಿಸ್ಟ್ರರ್ ಜನರಲ್ ಶಿವಶಂಕರೇ ಗೌಡ, ದ.ಕ. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ್ ಪೈ. ಬಿ. ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಂದಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜತೆಯಾದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ  ಅಧೀಕ್ಷಕ ಅಭಿಯಂತರ ಗಣೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರ್, ಸೆಕ್ಷನ್ ಆಫೀಸರ್ ಶ್ರೀಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News