ವಾಮಂಜೂರಿನ ಆದಿತ್ಯ ಕಿರಣ್‌ಗೆ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ

Update: 2021-12-29 14:49 GMT

ಗುರುಪುರ, ಡಿ.29: ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ನಡೆದ ಕಿರಿಯರ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್-2021ರಲ್ಲಿ ಪಾಲ್ದೆನೆಯ ಕ್ಯಾಂಬ್ರಿಡ್ಜ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿ, ವಾಮಂಜೂರಿನ ಜಿ. ಆದಿತ್ಯ ಕಿರಣ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಕಾವೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ (ಐಕೆಎಂಎ) ಸಂಸ್ಥೆಯಲ್ಲಿ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದು, ನಿತಿನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಬೇತು ಪಡೆಯುತ್ತಿದ್ದಾರೆ. ಜಿ. ಕಿರಣ್ ಮತ್ತು ಸಿಎಸ್ ಲೀಲಾವತಿ ದಂಪತಿಯ ಪುತ್ರನಾಗಿರುವ ಇವರು ಬಾಗಲಕೋಟೆಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಡಬ್ಯೂಯುಎಸ್‌ಎಚ್‌ಯು ಚಾಂಪಿಯನ್‌ ಶಿಪ್ ಮತ್ತು ಮೈಸೂರು ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News