ಮಂಗಳೂರು: ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ
ಮಂಗಳೂರು, ಡಿ.29: ನಗರದ ಜಿಎಚ್‌ಎಸ್ ಅಡ್ಡ ರಸ್ತೆಯಲ್ಲಿ (ಜುವೆಲ್ಲರಿ ಲೇನ್) ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಾಗಾಗಿ 2022ರ ಫೆಬ್ರವರಿ 11ರವರೆಗೆ ಅಂದರೆ 45 ದಿನಗಳ ಕಾಲ ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ಸ್ಟೇಟ್‌ಬ್ಯಾಂಕಿನಿಂದ ಉರ್ವಸ್ಟೋರ್, ಕೋಡಿಕಲ್, ದಂಬೇಲ್, ಕುಂಜತ್ತಬೈಲು ಕಡೆಗೆ ಜಿಎಚ್‌ಎಸ್ ರಸ್ತೆ ಮೂಲಕ (ಜಿಎಚ್‌ಎಸ್ ಅಡ್ಡರಸ್ತೆಯ- ಜ್ಯುವೆಲ್ಲರಿ ಲೇನ್) ಸಂಚರಿಸುವ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸದೆ, ಕೆ.ಬಿ.ಕಟ್ಟೆ, ಹಂಪನಕಟ್ಟೆ, ಕೆ.ಎಸ್. ರಾವ್ ರಸ್ತೆ, ನವಭಾರತ್, ಡೊಂಗರಕೇರಿ ಕಟ್ಟೆ, ಡೊಂಗರಕೇರಿ ದೇವಸ್ಥಾನ, ನ್ಯೂಚಿತ್ರಾ ಜಂಕ್ಷನ್ ಮೂಲಕ ಸಂಚರಿಸಬೇಕು.
ಬಸ್‌ಗಳನ್ನು ಹೊರತುಪಡಿಸಿ ಇತರ ಲಘು ವಾಹನಗಳು ಕೆ.ಬಿ.ಕಟ್ಟೆ, ಜಿಎಚ್‌ಎಸ್ ರಸ್ತೆ, ಶರವು, ದೇವಸ್ಥಾನ, ಕೆ.ಎಸ್.ರಾವ್ ರಸ್ತೆ, ನವಭಾರತ್, ಡೊಂಗರಕೇರಿ ಕಟ್ಟೆ, ಡೊಂಗರಕೇರಿ ದೇವಸ್ಥಾನ, ನ್ಯೂಚಿತ್ರಾ ಜಂಕ್ಷನ್ ಮೂಲಕ ಸಂಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.