×
Ad

ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

Update: 2021-12-29 23:08 IST

ಉಡುಪಿ, ಡಿ.29: ಕೊರಗಜ್ಜನ ಕಾಣಿಕೆ ಡಬ್ಬಿಗೆ ಕಾಂಡೋಮ್ ಹಾಕಿರುವ ದೇವದಾಸ ದೇಸ ಎಂಬಾತನ ಕೃತ್ಯವನ್ನು  ಭಾರತೀಯ ಕ್ರೈಸ್ತ ಒಕ್ಕೂಟ ಖಂಡಿಸಿದೆ.

ಇದು ಕೋಮು ಸಾಮರಸ್ಯವನ್ನು ಕೆಡಿಸಲು  ಮಾಡಿದ ಕೃತ್ಯ. ಆತನಿಗೆ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆಯನ್ನು ಕೊಡಬೇಕೆಂದು ನಾವು ಒತ್ತಾಯಿಸುತೇವೆ.  ಕ್ರೈಸ್ತ ಧರ್ಮ ಯಾವತ್ತೂ ಕೂಡ ಇನ್ನೊಂದು ಧರ್ಮವನ್ನು ಅಥವಾ ಬೇರೆಯವರ ನಂಬಿಕೆಯನ್ನು ಪ್ರಶ್ನೆ ಮತ್ತು  ದ್ವೇಷ ಮಾಡಲ್ಲ ಎಂದು  ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News