×
Ad

ಇಮ್ದಾದ್ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫಾ

Update: 2021-12-30 11:03 IST
ಮುಹಮ್ಮದ್ ಮುಸ್ತಫಾ

ಬಿ.ಸಿ.ರೋಡ್ : ಇಲ್ಲಿಗೆ ಸಮೀಪದ ಮಿತ್ತಬೈಲ್ - ಶಾಂತಿಅಂಗಡಿಯ ಇಮ್ದಾದ್ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್  ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫಾ ಪಿ.ಬಿ.ಆಯ್ಕೆಯಾಗಿದ್ದಾರೆ.

ಟ್ರಸ್ಟ್ ನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಇಮ್ದಾದ್ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ನ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಿತ್ತಬೈಲ್ ಮಸೀದಿ ಖತೀಬ್ ಹಾಜಿ ಎಮ್.ವೈ. ಅಶ್ರಫ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ - ಪ್ರಕ್ರಿಯೆ ನಡೆಯಿತು.

ನೂತನ ಗೌರವ ಅಧ್ಯಕ್ಷರಾಗಿ ಮಜೀದ್ ಚಾಂದ್, ಉಪಾಧ್ಯಕ್ಷರಾಗಿ ಅನ್ಸಾರ್ ಸಾಗರ್ ಪರ್ಲಿಯ, ಪ್ರ.ಕಾರ್ಯದರ್ಶಿಯಾಗಿ ಆದಂ ಪಲ್ಲ, ಜೊತೆ ಕಾರ್ಯದರ್ಶಿ ಯಾಗಿ ಅಬೂಬಕ್ಕರ್ ಕರಾವಳಿ,  ಕೋಶಾಧಿಕಾರಿಯಾಗಿ ಇಬ್ರಾಹಿಂ ಪಲ್ಲ,  ಲೆಕ್ಕ ಪರಿಶೋಧಕರಾಗಿ ಜಮಾಲುದ್ದೀನ್ ಎ.ವನ್, ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆರಿಸಲಾಯಿತು. ಆಶ್ರಫ್ ಶಾಂತಿ ಅಂಗಡಿ ಸ್ವಾಗತಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News