ಪ್ರಧಾನಿಯನ್ನು ಅನುಸರಿಸುತ್ತಿದ್ದೇನೆ, ಅದಕ್ಕೆ ಮಾಸ್ಕ್ ಧರಿಸಿಲ್ಲ: ಪತ್ರಕರ್ತರ ಪ್ರಶ್ನೆಗೆ ಸಂಜಯ್ ರಾವತ್ ಉತ್ತರ

Update: 2021-12-30 13:19 GMT

 ನಾಸಿಕ್: ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದೆಯೇ ಕಾಣಿಸಿಕೊಂಡ ಶಿವಸೇನೆ ಸಂಸದ ಸಂಜಯ್ ರಾವತ್, ಈ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ತಾವು ಪ್ರಧಾನಿಯ `ಉದಾಹರಣೆ'ಯನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮಾಸ್ಕ್ ಧರಿಸಲು ಹೇಳುತ್ತಾರೆ. ಆದರೆ ಅವರೇ ಮಾಸ್ಕ್ ಧರಿಸುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಸ್ಕ್ ಧರಿಸುತ್ತಾರೆ. ಮೋದಿ ಈ ದೇಶದ ನಾಯಕ. ನಾನು ಪ್ರಧಾನಿಯನ್ನು ಅನುಸರಿಸುತ್ತೇನೆ, ಆದುದರಿಂದ ಮಾಸ್ಕ್ ಧರಿಸುತ್ತಿಲ್ಲ, ಜನರು ಕೂಡ ಮಾಸ್ಕ್ ಧರಿಸುತ್ತಿಲ್ಲ" ಎಂದು ಹೇಳಿದರು.

ಅದೇ ಸಮಯ ಜನರು ಎಚ್ಚರಿಕೆಯಿಂದಿರಬೇಕು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಜಾಗರೂಕರಾಗಿರಬೇಕು ಎಂಬ ಸಲಹೆಯೂ ಅವರಿಂದ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News