×
Ad

ತಾಲೂಕಿನ ಎಲ್ಲಾ ಸಮುದಾಯ ಭವನ ಸಮಿತಿ ರಚಿಸಿ ನಿರ್ವಹಣೆ ಮಾಡಲು ಪಿಡಿಒಗಳಿಗೆ ಅಧಿಕಾರ : ತಹಶೀಲ್ದಾರ್ ಪುರಂದರ

Update: 2021-12-30 19:46 IST

ಕಾರ್ಕಳ :  ತಾಲೂಕಿನಲ್ಲಿರುವ ಎಲ್ಲಾ  ಸಮುದಾಯ ಭವನಗಳ ನಿರ್ವಹಣೆ ಮಾಡಲು  ಪಿಡಿಒಗಳಿಗೆ ಅಧಿಕಾರ ನೀಡಲಾಗುವುದು ಎಂದು ಕಾರ್ಕಳ ತಹಸಿಲ್ದಾರ್ ಪುರಂದರ ಹೇಳಿದರು.

ಕಾರ್ಕಳದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ  ಕಾರ್ಕಳ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ  ಮಾತನಾಡಿ  ಡಿಮ್ಡ್ ಫಾರೆಸ್ಟ್   ವ್ಯಾಪ್ತಿಯಲ್ಲಿರುವ  ರುವ ಕುಟುಂಬಗಳ ವಾಸ್ತವ್ಯದ ಬಗ್ಗೆ ಅರ್ಜೀಗಳು ವಿಲೆವಾರಿಯಾಗದೆ ಇದ್ದು  ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಸರಕಾರ ಈಗಾಗಲೆ ಅಫಿದಾವಿತ್ ಸಲ್ಲಿಸಿದೆ. ಜನವರಿ ತಿಂಗಳಲ್ಲಿ ಸರಕಾರ ಈ ಬಗ್ಗೆ ಸಭೆಕರೆದಿದ್ದು  ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.

ಶ್ರೀನಿವಾಸ ಕಾರ್ಕಳ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿನ ಎಸ್‌ಸಿಎಸ್‌ಟಿ  ವಿದ್ಯಾರ್ಥೀಗಳಿಗೆ ವಿದ್ಯಾರ್ಥಿ ವೇತನ ಬಗ್ಗೆ ಪೂರ್ವ ಮಾಹಿತಿ ನೀಡದೆ ಹಂಚಿಕೆ ಮಾಡುತಿದ್ದು  ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತಿದೆ,  ಪುರಸಭೆಯ ಮುಖ್ಯಾಧಿಕಾರಿ ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು . ಇದರ ಬಗ್ಗೆ ತಹಸಿಲ್ದಾರ್ ಪುರಸಭೆ ಅಧಿಕಾರಿಗಳಿಗೆ ಈ ವಿಚಾರದಲ್ಲಿ  ಹೆಚ್ಚಿನ ಅನುದಾನ ತೆಗೆದಿಡುವಂತೆ ಸೂಚನೆ ನೀಡಿದರು.

ಇದೇ ಸಂದರ್ಭ ಉಪತಹಶೀಲ್ದಾರ್ ಮಂಜುನಾಥ ನಾಯಕ್, ಕಾರ್ಯನಿರ್ವಹಕಾಧಿಕಾರಿ ಗುರುದತ್, ಕಂದಾಯ ನಿರೀಕ್ಷಕ ಶಿವಪ್ರಸಾದ್, ಅಜೆಕಾರು ಠಾಣಾಧಿಕಾರಿ ಶುಭಕರ, ಸಮಾಜ ಕಲ್ಯಾಣ ಇಲಾಖಾಧಿಕಾರಿ ವಿಜಯಕುಮಾರ್, ಎಸ್.ಸಿ ಎಸ್.ಟಿ ಸಂಘದ ಪ್ರಮುಖರು ಇತರ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News