ಕದ್ರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ, ಕ್ಯಾಲೆಂಡರ್ ಬಿಡುಗಡೆ
Update: 2021-12-30 20:13 IST
ಮಂಗಳೂರು, ಡಿ.30: ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಜ.14ರಿಂದ 24ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಾತ್ರೆಯ ಆಮಂತ್ರಣ ಪತ್ರಿಕೆ ಮತ್ತು ದೇವಸ್ಥಾನದ ಕ್ಯಾಲೆಂಡರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ ಗುರುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಅಡಿಗ, ಕೆ. ದೇವದಾಸ ಪಾಂಡೇಶ್ವರ, ಹೆಚ್. ಕುಸುಮಾ ದೇವಾಡಿಗ, ನಿವೇದಿತಾ ಎನ್.ಶೆಟ್ಟಿ, ಕೆ.ರಾಜೇಶ್, ಹೆಚ್. ಕೆ. ಪುರುಷೋತ್ತಮ ಜೋಗಿ, ಮನೋಹರ ಸುವರ್ಣ, ನಾರಾಯಣ ಕೋಟ್ಯಾನ್ ಉಪಸ್ಥಿತರಿದ್ದರು.
ಕದ್ರಿ ಮಂಜುನಾಥ ಸ್ವಾಮೀಜಿ ಪ್ರಶಸ್ತಿ: ಈ ವರ್ಷದ ವಾರ್ಷಿಕ ಜಾತ್ರಾ ಸಂದರ್ಭ ಪ್ರಥಮ ಬಾರಿಗೆ ದೇವಳದ ತಂತ್ರಿ ದೇರೆಬೈಲ್ ವಿಠ್ಠಲದಾಸ ಅವರಿಗೆ ಕದ್ರಿ ಶ್ರೀಮಂಜುನಾಥ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಕಟನೆ ತಿಳಿಸಿದೆ.