ಹರಿಪ್ರಕಾಶ್‌ಗೆ ಪಿಎಚ್‌ಡಿ ಪದವಿ
Update: 2021-12-30 22:46 IST
ಮಂಗಳೂರು, ಡಿ.30: ನಗರ ಹೊರವಲಯದ ವಳಚ್ಚಿಲ್ನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜ್‌ನ ಎಂಬಿಎ ವಿಭಾಗದ ಪ್ರಾಧ್ಯಾಪಕ ಹರಿಪ್ರಕಾಶ್ ಯು. ಪಿ. ಅವರು ಡಾ. ಬೀರಾನ್ ಮೊಯಿದ್ದೀನ್ ಬಿ.ಎಂ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಎ ಕಂಪ್ಯಾರೇಟಿವ್ ಸ್ಟಡಿ ಆಫ್ ಶಾಪಿಂಗ್ ಬಿಹೇವಿಯರ್ ಆಫ್ ಆರ್ಗನೈಝ್ಡಾ ಆ್ಯಂಡ್ ಅನ್ ಆರ್ಗನೈಝ್ಡಾ ಗ್ರೋಸರಿ ರಿಟೇಲಿಂಗ್ ಶಾಪರ್ಸ್ ಇನ್ ದಕ್ಷಿಣ ಕನ್ನಡ ಆ್ಯಂಡ್ ಉಡುಪಿ ಡಿಸ್ಟ್ರಿಕ್ಟೃ್’ ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.
ಮೂಲತಃ ಕಲ್ಲುಗುಂಡಿಯ ಸಂಪಾಜೆ ನಿವಾಸಿಗಳಾಗಿರುವ ಶಾಂತಾ-ಯು.ಪಿ. ಭಟ್ ದಂಪತಿಯ ಪುತ್ರರಾಗಿರುವ ಇವರು ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಅಣ್ಣಾಮಲೈ ವಿವಿಯಿಂದಲೂ ಇವರು ಎಂಫಿಲ್ ಪದವಿ ಪಡೆದಿದ್ದಾರೆ.