×
Ad

ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಶಸ್ತಿಗೆ ಆಹ್ವಾನ

Update: 2021-12-30 22:48 IST

ಮಂಗಳೂರು, ಡಿ.30: ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲ ವೀರರಾಣಿ ಅಬ್ಬಕ್ಕನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 2018ರಲ್ಲಿ ಸ್ಥಾಪನೆಯಾಗಿರುವ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ‘ನಮ್ಮ ಅಬ್ಬಕ್ಕ 2022’ ಅಮೃತ ಸ್ವಾತಂತ್ರ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು 2022ರ ಫೆಬ್ರವರಿ 5-6ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿವೆ. ಈ ಸಂದರ್ಭ ನೀಡಲಾಗುವ 2 ಮಹತ್ವದ ಪ್ರಶಸ್ತಿಗಳಿಗೆ ಸಾಧಕರಿಂದ ಅಥವಾ ಪರಿಚಿತರಿಂದ ಅರ್ಜಿ ಆಹ್ವಾನಿಸಲಾಗಿದೆ.

*ರಾಣಿ ಅಬ್ಬಕ್ಕ ಸೇವಾ ಪ್ರಶಸ್ತಿ: ಶಿಕ್ಷಣ, ಸಾಹಿತ್ಯ, ಸಂಸ್ಕೃತಿ,ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವಾ ಕಾರ್ಯದಿಂದ ಗುರುತಿಸಿಕೊಂಡಿರುವ 60 ವರ್ಷ ಮೇಲ್ಪಟ್ಟ ಮಹಿಳೆ/ಪುರುಷ ಸಾಧಕರೊಬ್ಬರಿಗೆ ‘ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ-2022’ ಮೀಸಲಾಗಿದೆ.

*’ನಮ್ಮ ಅಬ್ಬಕ್ಕ’ ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿ: ಪ್ರಸ್ತುತ ವರ್ಷ ರಾಷ್ಟ್ರಾದ್ಯಂತ ಆಚರಿಸಲ್ಪಡುವ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಲುವಾಗಿ ವಿವಿಧ ರಂಗಗಳ ಜೀವಮಾನ ಸಾಧನೆಗಾಗಿ ಓರ್ವರಿಗೆ ‘ನಮ್ಮ ಅಬ್ಬಕ್ಕ’ ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿಯನ್ನು ನೀಡಲಾಗುವುದು. ಅಂತಹ ಸಾಧಕರ ಬಗ್ಗೆ ಸೂಕ್ತ ದಾಖಲೆಗಳನ್ನು ಸ್ವತಃ ಅಥವಾ ಸಾರ್ವಜನಿಕರು ಜನವರಿ 15ರೊಳಗೆ ಭಾಸ್ಕರ ರೈ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ‘ವಿದ್ಯಾ’ ಕದ್ರಿಕಂಬಳ, ಬಿಜೈ ಅಂಚೆ, ಮಂಗಳೂರು - 575004 (kukkuvallibr@gmail.com )ಕ್ಕೆ ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News