ಸೂರಿಂಜೆ ಎಸ್ಕೆಎಸ್ಸೆಸ್ಸೆಫ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ
Update: 2021-12-30 23:01 IST
ಸುರತ್ಕಲ್ : ಎಸ್ಕೆಎಸ್ಸೆಸ್ಸೆಫ್ ಸೂರಿಂಜೆ ಶಾಖೆಯ ನೂತನ ವರ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಶಾಹುಲ್ ಹಮೀದ್, ಉಪಾಧ್ಯಕ್ಷರಾಗಿ ಮುಹಿಯುದ್ದೀನ್ ಕರೀಂ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್, ಕಾರ್ಯಕಾರಿ ಕಾರ್ಯದರ್ಶಿಯಾಗಿ ಲುಕ್ಮಾನ್, ಕೋಶಾಧಿಕಾರಿಯಾಗಿ ಫಯಾಝ್ ಆಯ್ಕೆಯಾಗಿದ್ದಾರೆ.
ಕ್ಲಸ್ಟರ್ ಕೌನ್ಸಿಲರ್ಗಳಾಗಿ ಇಲ್ಯಾಸ್, ದಾವೂದ್ ಹನೀಫಿ, ಫಾರಿಶ್, ಇರ್ಷಾನ್, ಇಬಾದ್ ಕಾರ್ಯದರ್ಶಿಯಾಗಿ ಕೆ. ಎಂ. ಫಾರೂಕ್ , ವಿಖಾಯ ಕಾರ್ಯದರ್ಶಿಯಾಗಿ ರಾಝಿಕ್, ಟ್ರೆಂಡ್ ಕಾರ್ಯದರ್ಶಿಯಾಗಿ ಸವಾದ್, ಸಹಚಾರಿ ಮುಖಂಡರಾಗಿ ನೂರುದ್ದೀನ್, ಸರ್ಗಲಯ ಘಟಕದ ಮುಖಂಡರಾಗಿ ಅಝಮ್, ತ್ವಲಬಾ ಘಟಕದ ನಿರ್ವಾಹಕರಾಗಿ ಮುಖ್ತಾರ್ ಮುಸ್ಲಿಯಾರ್, ಕ್ಯಾಂಪಸ್ ವಿಂಗ್‌ನ ನಿರ್ವಾಹಕರಾಗಿ ಇರ್ಷಾನ್ ಆಯ್ಕೆಯಾಗಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ಸೂರಿಂಜೆ ಕಚೇರಿಯ ಪ್ರಕಟನೆ ತಿಳಿಸಿದೆ.