ಮ್ಯಾನ್ಮಾರ್: ದೇಶದ್ರೋಹ ಅಪರಾಧದಡಿ ಸೂಕಿಯ ಸಹಚರರಿಗೆ ಜೈಲುಶಿಕ್ಷೆ

Update: 2021-12-30 18:09 GMT
ಆಂಗ್ ಸಾನ್ ಸೂಕಿ

ಯಾಂಗಾನ್, ಡಿ.30: ಮ್ಯಾನ್ಮಾರ್ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರ ಇಬ್ಬರು ನಿಕಟ ಸಹವರ್ತಿಗಳಿಗೆ ಅಲ್ಲಿನ ಸೇನಾ ನ್ಯಾಯಾಲಯ ದೇಶದ್ರೋಹ ಅಪರಾಧಕ್ಕೆ 2 ವರ್ಷದ ಜೈಲುಶಿಕ್ಷೆ ವಿಧಿಸಿದೆ ಎಂದು ಮೂಲಗಳು ಹೇಳಿವೆ.

ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಪಕ್ಷದ ಕೇಂದ್ರ ಸಮಿತಿಯ ಇಬ್ಬರು ಸದಸ್ಯರಾದ ಆರ್ಥಿಕ ಸಲಹೆಗಾರ ಹ್ಯಾನ್ ಥಾರ್ ಮಿಂಟ್ ಮತ್ತು ಥಾಯಿನ್ ವೊ ಅವರ ವಿರುದ್ಧ ದಾಖಲಿಸಿದ್ದ ದೇಶದ್ರೋಹ ಆರೋಪ ಸಾಬೀತಾಗಿದ್ದು ಇಬ್ಬರಿಗೂ ತಲಾ 2 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಘೋಷಿಸಿದೆ.

ಫೆ.1ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೇನೆಯು ಅಧಿಕಾರವನ್ನು ಕೈವಶ ಮಾಡಿಕೊಂಡಿತ್ತು. ಅಂದಿನಿಂದ ಸೂಕಿ ಸಹಿತ ಹಲವು ಮುಖಂಡರು ಗೃಹಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News