×
Ad

ಜ.2ರಂದು ‘ಆ 90 ದಿಗಳು’ ಚಿತ್ರದ ಟ್ರೈಲರ್ ಬಿಡುಗಡೆ

Update: 2021-12-31 20:01 IST

ಉಡುಪಿ : ರಾಷ್ಟ್ರಪ್ರಶಸ್ತಿ ವಿಜೇತ ಯಾಕೂಬ್ ಗುಲ್ವಾಡಿ ಮತ್ತು ರೊನಾಲ್ಡ್ ಲೋಬೋ ಅವರ ಜಂಟಿ ನಿರ್ದೇಶನದ ‘ಆ 90 ದಿನಗಳು’ ಸಿನೆಮಾ ಜ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪೂರ್ವಭಾವಿಯಾಗಿ ಜ.2ರಂದು ಸಂಜೆ 6ಗಂಟೆಗೆ ಕುಂದಾಪುರದ ಗುಲ್ವಾಡಿಯಲ್ಲಿ ಸಿನೆಮಾದ ಫಸ್ಟ್‌ಲುಕ್, ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರೊನಾಲ್ಡ್ ಲೋಬೋ, ಒಳ್ಳೆಯ ವ್ಯಕ್ತಿ ಮತ್ತು ಕೆಟ್ಟ ವ್ಯಕ್ತಿಗಳು ಮುಖಾಮುಖಿ ಯಾದಾಗ ಸಂಭವಿಸುವ ಘಟನೆಗಳನ್ನು ಈ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕಥೆ ಮೂಲಕ ಸಿನೆಮಾ ನಿರ್ಮಿಸಲಾಗಿದೆ. ಮಾಲವಿಕ ಮೋಷನ್ ಪಿಕ್ಟರ್ಸ್, ಗುಲ್ವಾಡಿ ಟಾಕೀಸ್ ಮತ್ತು ಇತರ ಇಬ್ಬರು ಮಿತ್ರರು ಸೇರಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ಸಿನೆಮಾವನ್ನು ನಿರ್ಮಿಸಲಾಗಿದೆ ಎಂದರು.

ರೋನಾಲ್ಡ್ ಕತೆ, ಚಿತ್ರಕತೆ ಬರೆದಿರುವ ಈ ಸಿನೆಮಾಕ್ಕೆ ರಾಧಾಕೃಷ್ಣ ಬಸ್ರೂರು ಸಂಗೀತ ನೀಡಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಗ್ರಹಣ, ಪ್ರಮೋದ್ ಮರ ವಂತೆ ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ನಿರ್ದೇಶಕ ಯಾಕೂಬ್ ಗುಲ್ವಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ರತಿಕ್ ಮುರ್ಡೇಶ್ವರ, ನಾಯಕ ನಟಿ ಕೃತಿಕಾ, ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News