ಮುಸ್ಲಿಂ ವೆಲ್ಫೇರ್ ವಾರ್ಷಿಕ ಮಹಾಸಭೆ
Update: 2021-12-31 20:03 IST
ಉಡುಪಿ, ಡಿ.31: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಇದರ 39 ನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಗಫೂರ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಾರ್ಯಾಲಯದಲ್ಲಿ ಇತ್ತೀಚೆಗೆ ಜರಗಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ವಾರ್ಷಿಕ ವರದಿಯನ್ನು ವಾಚಿಸಿ ಅನುಮೋದನೆ ಪಡೆದರು. ಅಬ್ದುಲ್ ಗಫೂರ್ ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು. 2021-22ಕ್ಕೆ ಪ್ರಸಕ್ತ ಕಾರ್ಯಕಾರಿಣಿ ಸದಸ್ಯರು ಮುಂದು ವರಿಯಲು ಸಭೆಯು ಸರ್ವಾನುಮತದೊಂದಿಗೆ ಒಪ್ಪಿಗೆ ನೀಡಿತು.
ಮುನೀರ್ ಮಹಮೂದ್ ಕುರಾನ್ ಪಠಿಸಿದರು. ಉಮರ್ ಸಾಹೇಬ್ ಸ್ವಾಗತಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.