ಉಡುಪಿ: ಜಮೀಯ್ಯತುಲ್ ಫಲಾಹ್ ವತಿಯಿಂದ 29 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಡಿ.31: ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಘಟಕ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಝಕಾತ್ ಫಂಡ್‌ನಿಂದ ವಿದ್ಯಾರ್ಥಿವೇತನವನ್ನು ಇತ್ತೀಚೆಗೆ ಉಡುಪಿ ಜಾಮೀಯ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಪ್ರಥಮ ಪಿಯುಸಿ ಹಾಗೂ ಪ್ರಥಮ ಪದವಿ, ಡಿಪ್ಲೋಮಾ ಕಲಿಯುತ್ತಿರುವ 29 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮುಖ್ಯ ಅತಿಥಿ ಗಳಾಗಿ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಬ್ಬಿ ಅಹ್ಮದ್ ಕಾಝಿ, ಜಮೀಯ್ಯತುಲ್ ಫಲಾಹ್‌ನ ಪ್ರಮುಖರಾದ ಮೊಯ್ದಿನ್ ಬ್ಯಾರಿ, ಜಮೀಯ್ಯತುಲ್ ಫಲಾಹ್ ದ.ಕ. ಉಡುಪಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಹಸನ್ ಕಾರ್ಕಳ ಮಾತನಾಡಿದರು.
ಉಡುಪಿ ತಾಲೂಕು ಘಟಕದ ಸದಸ್ಯರಾದ ವಿ.ಎಸ್.ಉಮ್ಮರ್, ಹಸನ್ ಅಜ್ಜರಕಾಡು, ಮುಹಮ್ಮದ್ ಹುಸೇನ್ ಚಿಟ್ಪಾಡಿ, ಹುಸೇಬ್ ಬಾಕೂರು, ಅನ್ವರ್ ಉಪಸ್ಥಿತರಿದ್ದರು.
ಯಾಸೀರ್ ಕಿರಾಅತ್ ಪಠಿಸಿದರು. ತಾಲೂಕು ಅಧ್ಯಕ್ಷ ಕಾಸಿಮ್ ಬಾರಕೂರು ಸ್ವಾಗತಿಸಿದರು. ಕಾರ್ಯದರ್ಶಿ ಸಮೀರ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು