ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
Update: 2021-12-31 22:17 IST
ಕಾರ್ಕಳ, ಡಿ.31: ವಾಸುದೇವ ನಾಯಕ್ (56) ಎಂಬವರು ಡಿ.27ರಂದು ಮನೆಗೆ ಬೀಗ ಹಾಕಿ ಮೊಬೈಲ್ ಫೋನ್ ಮತ್ತು ಸ್ಕೂಟರನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಸಾಧು ಸದಾಶಿವ ಮೂಲ್ಯ(65) ಎಂಬವರು ಡಿ.26ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.