×
Ad

ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2021-12-31 22:19 IST

ಮಲ್ಪೆ, ಡಿ.31: ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಮೀನುಗಾರ ರೊಬ್ಬರು ಆಯತಪ್ಪಿ ಬೋಟಿ ನಿಂದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಡಿ.30 ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಗೋಪಾಲ ಮೊಗೇರ(44) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರರೊಂದಿಗೆ ಪಡುತೋನ್ಸೆ ಗ್ರಾಮದ ರವೀಂದ್ರ ಶ್ರೀಯಾನ್ ಎಂಬವರ ಬೋಟ್ನಲ್ಲಿ ಡಿ.29ರಂದು ರಾತ್ರಿ ಮೀನುಗಾರಿಕೆಗೆ ತೆರಳಿದ್ದು, ಡಿ.30ರ ನಸುಕಿನ ವೇಳೆ ಅರಬ್ಬಿ ಸಮುದ್ರದಲ್ಲಿ ಸುಮಾರು 12 ನಾಟಿಕಲ್ ಮೈಲಿ ದೂರದಲ್ಲಿ ಬಲೆ ಎಳೆಯುವ ವೇಳೆ ಗೋಪಾಲ ಮೊಗೇರ ಆಯ ತಪ್ಪಿಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾದರು. ಡಿ.31ರಂದು ಬೆಳಿಗ್ಗೆ ಗೋಪಾಲ ಮೊಗೇರ ಅವರ ಮೃತದೇಹ ಸಮುದ್ರದ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News