​ಕಾಸರಗೋಡು : ಮಾದಕ ವಸ್ತು ಮಾರಾಟ ಯತ್ನ; ಮಹಿಳೆ ಸಹಿತ ಇಬ್ಬರ ಸೆರೆ

Update: 2023-06-05 06:41 GMT

ಕಾಸರಗೋಡು : ಮಂಜೇಶ್ವರ ಹೊಸಂಗಡಿಯಲ್ಲಿ ವಸತಿ ಗೃಹ ಕೇಂದ್ರೀಕರಿಸಿ ನಡೆಯುತ್ತಿದ್ದ  ಭಾರೀ ಮೌಲ್ಯದ  ಮಾದಕ ವಸ್ತು ಸಹಿತ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು  ಬಂಧಿಸಿದ್ದಾರೆ.

ಮಂಜೇಶ್ವರ ಬಡಾಜೆಯ ಸೂರಜ್ ರೈ (26) ಮತ್ತು ಮಹಾರಾಷ್ಟ್ರ ಥಾಣೆಯ ಸೈನಾ ಡಿಸೋಜ (23) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 21 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಹಾಗೂ 10,850 ರೂ. ವಶಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.  ವೈಭವ್ ಸಕ್ಸೇನಾರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಡಿವೈಎಸ್ಪಿ  ವಿ.ವಿ ಮನೋಜ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News