×
Ad

ಮಹಿಳೆಗೆ ತಪ್ಪಿದ ವಿಮಾನ: 20 ಸಾವಿರ ರೂ. ದಂಡ ಪಾವತಿಸಲು Uberಗೆ ಆದೇಶ

Update: 2022-10-26 07:51 IST
ಸಾಂದರ್ಭಿಕ ಚಿತ್ರ

ಮುಂಬೈ: ಉಬರ್ ಇಂಡಿಯಾ (Uber India)ದ ಸೇವಾ ನ್ಯೂನತೆಯನ್ನು ಎತ್ತಿಹಿಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯ, ಗ್ರಾಹಕಿಯೊಬ್ಬರಿಗೆ 20 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದೆ.

ದೊಂಬಿವ್ಲಿ (Dombivli)ಯ ಮಹಿಳೆ ಎದುರಿಸಿದ ಮಾನಸಿಕ ಉದ್ವಿಗ್ನತೆಗಾಗಿ 10 ಸಾವಿರ ಹಾಗೂ ವ್ಯಾಜ್ಯದ ವೆಚ್ಚವಾಗಿ 10 ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವೇಳೆ ಉಬರ್ ಚಾಲಕ ಹಲವು ವಿಧದಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ಚೆನ್ನೈಗೆ ಹೋಲುವ ವಿಮಾನ ತಪ್ಪಿಸಿಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

ದೂರು ನೀಡಿದ ಕವಿತಾ ಶರ್ಮಾ (Kavita Sharma, advocate) ವಕೀಲೆಯಾಗಿದ್ದು, 2018ರ ಜೂನ್ 12ರಂದು ಸಂಜೆ 5.50ಕ್ಕೆ ಚೆನ್ನೈಗೆ ವಿಮಾನದಲ್ಲಿ ತೆರಳಲು ಉದ್ದೇಶಿಸಿದ್ದರು. ಮನೆಯಿಂದ 36 ಕಿಲೋಮೀಟರ್ ದೂರ ಇದ್ದ ವಿಮಾನ ನಿಲ್ದಾಣಕ್ಕೆ ತೆರಳಲು ಮಧ್ಯಾಹ್ನ 3.29ಕ್ಕೆ ಉಬರ್ ಕಾರು ಬುಕ್ ಮಾಡಿದರು. ಕಾರು ಹಂಚಿಕೆಯಾಗಿ 14 ನಿಮಿಷ ಬಳಿಕ ಮನೆ ಬಳಿಗೆ ಕಾರು ಬಂದಿದೆ. ಪದೇ ಪದೇ ಕರೆ ಮಾಡಿದ ಬಳಿಕ ಚಾಲಕ ಬಂದು ಮಹಿಳೆಯನ್ನು ಕರೆದೊಯ್ದಿದ್ದಾನೆ. ಬಂದ ಬಳಿಕ ಕೂಡಾ ದೂರವಾಣಿ ಸಂಭಾಷಣೆಯಲ್ಲಿ ತೊಡಗಿದ್ದ ಚಾಲಕ, ಮಾತು ಮುಗಿಸಿದ ಬಳಿಕವಷ್ಟೇ ಹೊರಟಿದ್ದ ಎಂದು ಮಹಿಳೆ ದೂರು ನೀಡಿದ್ದರು.

ಬಳಿಕ ಚಾಲಕ ತಪ್ಪಾಗಿ ವಾಹನ ತಿರುಗಿಸಿದ್ದಲ್ಲದೇ ಸಿಎನ್‍ಜಿ ಸ್ಟೇಷನ್‍ನಲ್ಲಿ ಸುಮಾರು 15-20 ನಿಮಿಷ ವ್ಯರ್ಥ ಮಾಡಿದ್ದ. ಕೊನೆಗೆ 5.23ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿಸಿದ. ಇದರಿಂದಾಗಿ ಮಹಿಳೆ ವಿಮಾನ ತಪ್ಪಿಸಿಕೊಳ್ಳಬೇಕಾಯಿತು. ಬಳಿಕ ಸ್ವಂತ ಖರ್ಚಿನಲ್ಲಿ ಮಂದಿನ ವಿಮಾನದಲ್ಲಿ ತೆರಳಿದ್ದರು. ಬುಕ್ ಮಾಡುವ ಅವಧಿಯಲ್ಲಿ 563 ರೂಪಾಯಿ ಶುಲ್ಕ ಎಂದು ತೋರಿಸಲಾಗುತ್ತಿತ್ತು. ಆದರೆ 703 ರೂಪಾಯಿ ಬಿಲ್ ಮಾಡಲಾಗಿತ್ತು ಎಂದು ಆಪಾದಿಸಲಾಗಿತ್ತು. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News