ಸ್ವಿಗ್ಗಿ, ಝೊಮ್ಯಾಟೋ, ಓಲಾ, ಉಬರ್ ಮೇಲೆ ಶೇ. 5 ಜಿಎಸ್‍ಟಿ ಇಂದಿನಿಂದ ಜಾರಿ

Update: 2022-01-01 09:43 GMT

ಹೊಸದಿಲ್ಲಿ: ಆನ್‍ಲೈನ್ ಆಹಾರ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಝೊಮ್ಯಾಟೋ ಇಂದಿನಿಂದ ಅನ್ವಯವಾಗುವಂತೆ ಶೇ. 5 ಜಿಎಸ್‍ಟಿ ಪಾವತಿಸಬೇಕಿದೆ.

ಇಲ್ಲಿಯ ತನಕ ರೆಸ್ಟಾರೆಂಟ್ ಗಳೇ ಜಿಎಸ್‍ಟಿ ಸಂಗ್ರಹಿಸಿ ಪಾವತಿಸುತ್ತಿದ್ದವು. ಇನ್ನು ಮುಂದೆ ಸ್ವಿಗ್ಗಿ ಮತ್ತು ಝೊಮ್ಯಾಟೋ ಸಂಸ್ಥೆಗಳೇ ಈ ಜಿಎಸ್‍ಟಿ ಸಂಗ್ರಹಿಸಿ ಪಾವತಿಸಬೇಕಿದೆ. ಈ ಹಿಂದೆ ಹಲವು ರೆಸ್ಟಾರೆಂಟ್ ಗಳು ಗ್ರಾಹಕರಿಂದ ಜಿಎಸ್‍ಟಿ ಸಂಗ್ರಹಿಸುತ್ತಿದ್ದರೂ ಅದನ್ನು ಸರಕಾರಕ್ಕೆ ಪಾವತಿಸುವುದನ್ನು ತಪ್ಪಿಸಿಕೊಳ್ಳುತ್ತಿದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

 ಆನ್‍ಲೈನ್ ಕ್ಯಾಬ್ ಸೇವೆ ಒದಗಿಸುವ ಉಬರ್ ಮತ್ತು ಓಲಾ ಕೂಡ ಶೇ. 5ರಷ್ಟು ಜಿಎಸ್‍ಟಿಯನ್ನು ಬುಕಿಂಗ್ ನಡೆಸುವುದಕ್ಕೆ ಪಾವತಿಸಬೇಕಿದೆ.

ಕಳೆದ ವರ್ಷದ ಸೆಪ್ಟೆಂಬರ್ 17ರಂದು ನಡೆದ 45ನೇ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈ ಕ್ರಮ ಇಂದಿನಿಂದ ಜಾರಿಯಾಗುತ್ತಿದೆ.

ಇಂದಿನಿಂದ ಅನ್ವಯವಾಗುವಂತೆ  ಎಲ್ಲಾ ಪಾದರಕ್ಷೆಗಳ ಖರೀದಿ ಸಂದರ್ಭವೂ ಶೇ. 12ರಷ್ಟು ಜಿಎಸ್‍ಟಿ ಅನ್ವಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News