×
Ad

ನಾಲ್ಕು ವರ್ಷದ ಬಾಲಕಿಯ ಮೇಲೆ ಬೀದಿನಾಯಿಗಳ ದಾಳಿ, ಘಟನೆಯ ವೀಡಿಯೊ ಸಿಸಿಟಿವಿಯಲ್ಲಿ ಸೆರೆ

Update: 2022-01-02 13:45 IST

ಇಂದೋರ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬೀದಿ ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕಿಯನ್ನು ಹಿಂಬಾಲಿಸಿ ನೆಲಕ್ಕೆ ಕೆಡವಿ ಕಚ್ಚಿರುವ ಭಯಾನಕ ಘಟನೆಯ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾರಿಹೋಕನು ಓಡಿಸಿದ ನಂತರವೇ ಬೀದಿ ನಾಯಿಗಳು ಬಾಲಕಿಯನ್ನು ಬಿಟ್ಟು ಹೋಗಿವೆ. ತೀವ್ರತರವಾಗಿ  ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೂಲಿ ಕಾರ್ಮಿಕನ ಮಗಳಾದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕಿಯ ಮೇಲೆ ನಾಯಿಗಳು ದಾಳಿ ಮಾಡಿವೆ. ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾಯಿಗಳು ಬಾಲಕಿಯನ್ನು ಸುತ್ತುವರಿದು  ತಲೆ, ಹೊಟ್ಟೆ ಹಾಗೂ ಕಾಲುಗಳಿಗೆ ಕಚ್ಚಿವೆ. ನಂತರ ನಾಯಿಗಳು ಬಾಲಕಿಯನ್ನು ನೆಲಕ್ಕೆ ಎಳೆದವು, ಬಳಿಕ ಬಾಲಕಿಯ ಮೇಲೆ ದಾಳಿಯನ್ನು ಮುಂದುವರೆಸಿದವು. ಭೋಪಾಲ್‌ನ ಬ್ಯಾಗ್ ಸೆವಾನಿಯಾದಲ್ಲಿನ ಸಿಸಿಟಿವಿಯಲ್ಲಿ ಘಟನೆಯ ವೀಡಿಯೊ ಪತ್ತೆಯಾಗಿದೆ. ದಾಳಿಯು ಕೆಲವು ನಿಮಿಷಗಳ ಕಾಲ ನಡೆದಿದ್ದು, ದಾರಿಹೋಕನು ಮಧ್ಯಪ್ರವೇಶಿಸಿ ನಾಯಿಗಳನ್ನು ಓಡಿಸಿದ್ದಾನೆ.

ಭೋಪಾಲ್‌ನಲ್ಲಿ ಬೀದಿ ನಾಯಿಗಳ ಉಪಟಳ ಜೋರಾಗಿದೆ. ಕಳೆದ ವರ್ಷ ಕೊಹೆಫಿಜಾ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಆಕೆಯ ತಾಯಿಯ ಸಮ್ಮುಖದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News