1.20 ಕೋ.ರೂ. ವೆಚ್ಚದಲ್ಲಿ ಮೇರಮಜಲು ಗ್ರಾಮದ 3 ರಸ್ತೆ ಮರು ಡಾಮರೀಕರಣ ಕಾಮಗಾರಿಗೆ ಚಾಲನೆ

Update: 2022-01-02 09:11 GMT

ಬಂಟ್ವಾಳ, ಜ.2: ಅಭಿವೃದ್ಧಿಯಲ್ಲಿ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೇರಮಜಲು ಗ್ರಾಮದ ರಸ್ತೆಗಳು ಇಂದು ತಾಲೂಕಿಗೆ ಮಾದರಿಯಾಗಿ ಅಭಿವೃದ್ಧಿಯಾಗುತ್ತಿದೆ‌ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

30.94 ಲಕ್ಷ ರೂ. ವೆಚ್ಚದಲ್ಲಿ ಕೊಡ್ಮಾಣ್ - ಮೇರಮಜಲು ರಸ್ತೆ, 43.68 ಲಕ್ಷ ರೂ. ವೆಚ್ಚದಲ್ಲಿ ಕುಟ್ಟಿಕಲ - ಮೇರಮಜಲು ರಸ್ತೆ, 46.30 ಲಕ್ಷ ರೂ. ವೆಚ್ಚದಲ್ಲಿ ಅಬ್ಬೆಟ್ಟು - ಕೊಡ್ಮಾಣ್ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಮೇರಮಜಲು ಚರ್ಚ್ ಬಳಿ ರವಿವಾರ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ವಿಟ್ಲ ಕ್ಷೇತ್ರಕ್ಕೆ ಸೇರಿದ್ದ ಸಂದರ್ಭದಲ್ಲಿ ಮೇರಮಜಲು ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ೨೦೦೭-೦೮ರಲ್ಲಿ ಮಂಗಳೂರು ಕ್ಷೇತ್ರಕ್ಕೆ ಸೇರಿದ ಬಳಿಕ ಜಲ್ಲಿ ತುಂಬಿದ್ದ ಗ್ರಾಮದ ರಸ್ತೆಗಳನ್ನು ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಅಭಿವೃದ್ಧಿ ಪಡಿಸಲಾಗಿದೆ ಎಂದರು.

4 ಗ್ರಾಮಕ್ಕೆ 24×7 ಕುಡಿಯುವ ನೀರು: ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಕ್ಕೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಒದಗಿಸುವ 61.25 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಗೊಂಡಿದ್ದು ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

 ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮೇರಮಜಲು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ, ಉಪಾಧ್ಯಕ್ಷ ಪದ್ಮನಾಭ, ಸದಸ್ಯರಾದ ಫ್ರಾನ್ಸಿಸ್ ಮೆಂಡೊನ್ಸಾ, ಅನಿಲ್ ಫೆನಾಂಡಿಸ್, ಅಶೋಕ ಪೂಜಾರಿ, ಸುಗಂಧಿ, ಸತೀಶ್ ನಾಯ್ಕ್, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ತೌಫೀಕ್, ಪುದು ಗ್ರಾಪಂ ಸದಸ್ಯರಾದ ಹುಸೈನ್ ಪಾಡಿ, ಫೈಝಲ್ ಅಮ್ಮೆಮಾರ್, ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಪ್ರಭು, ಮಾಜಿ ಸದಸ್ಯೆ ಲೂವಿಸ್ ಮೊಂತೆರೊ, ಪ್ರಮುಖರಾದ ಸುನೀಲ್, ಎಂ.ಕೆ.ಬಿ.ಅಬ್ದುಲ್ಲಾ, ಶೋಭಾ ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಪಂ ಸದಸ್ಯೆ ವೃಂದಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News