×
Ad

ಹೊಸ ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ: ಶಾಸಕ ವೇದವ್ಯಾಸ್ ಕಾಮತ್

Update: 2022-01-02 18:04 IST

ಮಂಗಳೂರು, ಜ.2: ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳೆಯ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಕೆಲವು ಹೊಸ ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ನವೀಕರಣಗೊಂಡ ಉದ್ಯಾನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಡನ್ ಕ್ಲಬ್ ಪರಿಸರದ ಹಳೆಯ ಪಾರ್ಕನ್ನು 10 ಲಕ್ಷ ರೂ.ವೆಚ್ಚದಲ್ಲಿ ನವೀಕರಿಸಲಾಗಿದೆ. ಪಾಳುಬಿದ್ದಂತಿದ್ದ ಉದ್ಯಾನವನದಲ್ಲಿ ಮಕ್ಕಳಿಗಾಗಿ ಆಟದ ಉಪಕರಣಗಳನ್ನು ಅಳವಡಿಸಿ ಉದ್ಯಾನದಲ್ಲಿ ವಾಯು ವಿಹಾರಕ್ಕಾಗಿ ಬರುವವರಿಗೆ ಉಪಯೋಗವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಉದ್ಯಾನದ ನಿರ್ವಹಣೆಯನ್ನು ಈಡನ್ ಫ್ರೆಂಡ್ಸ್ ಕ್ಲಬ್ ಮಾಡಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.

ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್‌ಗಳಾದ ಶಕೀಲಾ ಕಾವ, ಕದ್ರಿ ಮನೋಹರ್ ಶೆಟ್ಟಿ, ವನಿತಾ ಪ್ರಸಾದ್, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ರಾಮಕೃಷ್ಣ ರಾವ್ ಕದ್ರಿ, ಮಂಗಳ ಆಚಾರ್, ಪ್ರಸನ್ನ ಕಂಡೆಟ್ಟು, ನಾಗರಾಜ್ ಬಿಕರ್ನಕಟ್ಟೆ, ಗಾಯತ್ರಿ ಲೋಕೇಶ್, ವಸಂತ್ ಪೂಜಾರಿ, ಕುಸುಮಾ ದೇವಾಡಿಗ, ಚರಣ್ ಕಂಡೆಟ್ಟು, ಸಂತೋಷ್ ನಂತೂರು, ಗಂಗಾಧರ್ ಕದ್ರಿ, ಕಮಲಾಕ್ಷಿ ಗಂಗಾಧರ್, ನಿಶಿತಾ ನಂತೂರು, ಭಾರತಿ ಶೆಟ್ಟಿ ಕಂಡೆಟ್ಟು, ಲಕ್ಷ್ಮಿ ಗುಂಡಳಿಕೆ, ಕೀರ್ತನಾ, ಅನುರಾಧಾ, ಗುಂಡಳಿಕೆ ನವೀನ್, ಹರೀಶ್, ರಾಜೇಶ್, ದೃತೇಶ್, ಶಾಲಿನಿ, ಜಯಪ್ರದಾ, ಹರಿಣಾಕ್ಷ, ಈಡನ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News