ಪೊಂಪೈ: ರಿಕ್ಷಾ ಚಾಲಕ-ಮಾಲಕರಿಂದ ಆ್ಯಂಬುಲೆನ್ಸ್ ಕೊಡುಗೆ
Update: 2022-01-02 18:07 IST
ಗುರುಪುರ, ಜ.2: ಗುರುಪುರ ಕೈಕಂಬ ಪೋಂಪೈ ದ್ವಾರದ ಬಳಿಯ ಮೋದಿ ಪರಿವಾರ್ ರಿಕ್ಷಾ ಚಾಲಕ ಮಾಲಕರ ಸಂಘ ವ್ಯವಸ್ಥೆಗೊಳಿಸಿದ ಎರಡು ಉಚಿತ ಆ್ಯಂಬುಲೆನ್ಸ್ ಸೇವೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಶನಿವಾರ ಚಾಲನೆ ನೀಡಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಕೈಕಂಬ ಪೋಂಪೈ ಚರ್ಚ್‌ನ ಧರ್ಮಗುರು ರೆ. ಫಾ. ಆ್ಯಂಟನಿ ಲೋಬೊ, ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿಜಿ, ನಟ ಭೋಜರಾಜ ವಾಮಂಜೂರು ಮಾತನಾಡಿದರು.
ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಬಿಜೆಪಿ ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಹಿಕಾವೇ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ, ಡಾ. ಸಿದ್ಧಿಕ್ ಅಡ್ಡೂರು, ಕೈಕಂಬ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಭರತ್ ಕುಮಾರ್ ಜೈನ್, ಗೌರವಾಧ್ಯಕ್ಷ ರವಿ ಕೈಕಂಬ, ರೂಪೇಶ್ ಆದ್ಯಪಾಡಿ ಮತ್ತಿತರರು ಉಪಸ್ಥಿತರಿದ್ದರು.
ವಿಜೆ ಮನೋಜ್ ಕಾರ್ಯಕ್ರಮ ನಿರೂಪಿಸಿದರು.