ಉಡುಪಿ: ಜನಾರ್ದನ್ ಭಂಡಾರ್ಕಾರ್‌ಗೆ ನುಡಿ ನಮನ
ಉಡುಪಿ, ಜ.2: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇತ್ತೀಚೆಗೆ ಅಗಲಿದ ಪಕ್ಷದ ಹಿರಿಯ ನಿಷ್ಠಾವಂತ ನಾಯಕ ಜನಾರ್ದನ್ ಭಂಡಾರ್ಕರ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಡಿ.31ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪಕ್ಷದ ತತ್ವ ಸಿದ್ದಾಂತಗಳಿಗೆ ಸದಾ ತನ್ನನ್ನು ತೊಡಗಿಸಿಕೊಂಡು, ಪಕ್ಷದಲ್ಲಿ ಯಾವುದೇ ವಿಚಾರಗಳು ಬಂದರೂ ಪಕ್ಷದ ಪ್ರಮುಖರಿಗೆ ಕೂಡಲೇ ಸ್ಪಂದಿಸಿ ಮನವರಿಕೆ ಮಾಡುವ ಕೆಲಸ ಕಾರ್ಯದಲ್ಲಿ ಜನಾರ್ದನ ಭಂಡಾರ್ಕಾರ್‌ರವರು ಸದಾ ತೊಡಗಿಕೊಂಡದ್ದರು. ಉಡುಪಿ ನಗರದಲ್ಲಿ ನೀರಿನ ಸಮಸ್ಯೆಗಳು ಉದ್ಭವವಾದಾಗ ನನ್ನ ಬೆನ್ನು ಬಿಡದೆ ಸಮಸ್ಯೆಯನ್ನು ಬಗೆಹರಿಸಲು ಅವರು ಪಟ್ಟ ಪ್ರಯತ್ನ ಮರೆಯುವಂತದ್ದಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ಮೂರ್ತಿ, ಕುಶಲ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ದಿವಾಕರ ಕುಂದರ್, ಮಾಜಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ಗೀತಾ ವಾಗ್ಳೆ ಮೊದಲಾದವರು ಶ್ರದ್ದಾಂಜಲಿ ಅರ್ಪಿಸಿದರು.
ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ಸ್ವಾಗತಿಸಿ, ಪ್ರಾಸ್ತಾಕವಾಗಿ ಮಾತನಾಡಿ ದರು. ಸತೀಶ್ ಕೊಡವೂರು ವಂದಿಸಿದರು. ಸತೀಶ್ ಮಂಚಿ ಕಾರ್ಯಕ್ರಮ ನಿರ್ವಸಿದರು.