×
Ad

ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ #NRIappealDay ಟ್ವಿಟರ್ ಅಭಿಯಾನ

Update: 2022-01-02 20:51 IST

ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 'ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟ' (ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡರೇಷನ್) ನೇತೃತ್ವದಲ್ಲಿ ವಿಶ್ವದ 30ಕ್ಕೂ ಹೆಚ್ಚಿನ ದೇಶಗಳ 120ಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ "#NRIappealDay (ಎನ್ಆರೈ ಅಪೀಲ್ ಡೇ)" ಟ್ವಿಟರ್ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಅನಿವಾಸಿ ಕನ್ನಡಿಗರು 20 ಸಾವಿರಕ್ಕೂ ಹೆಚ್ಚು ಟ್ವೀಟ್ ಮೂಲಕ 50 ಲಕ್ಷ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಹಲವು ವಿರೋಧ ಪಕ್ಷದ ನಾಯಕರು, ಶಾಸಕರು, ಆಡಳಿತ ಪಕ್ಷದ ನಾಯಕರೂ ಟ್ವಿಟರ್ ಅಭಿಯಾನ ಕೈ ಜೋಡಿಸಿ ಅನಿವಾಸಿಗಳ ಬೇಡಿಕೆ ಕುರಿತು ಮುಖ್ಯಮಂತ್ರಿಯವರ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. 

ಟ್ವಿಟರ್ ಅಭಿಯಾನ ಪಾಲ್ಗೊಂಡ ಎಲ್ಲಾ ಕನ್ನಡ ಪರ ಮನಸುಗಳಿಗೆ ಅನಿವಾಸಿ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಅನಿವಾಸಿಗಳ ಬೇಡಿಕೆ ಈಡೇರಿಸಲು ನಮ್ಮ ಹೋರಾಟ ಟ್ವಿಟರ್ ಅಭಿಯಾನಕ್ಕೆ ಸೀಮಿತವಾಗಿಲ್ಲ. ಅನಿವಾಸಿಗಳ ಬೇಡಿಕೆಗಳ ಮನವಿಯನ್ನು ಮಾಜಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಖುದ್ದಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಲುಪಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಬೇಡಿಕೆ ಈಡೇರಿಸುವರೆಂಬ ಆಶಾಭಾವನೆ ಇದೆ. ಆದರೆ ಭರವಸೆ ಈಡೇರುವವರೆಗೂ ಸರ್ಕಾರಕ್ಕೆ  ದಿನನಿತ್ಯ ವಿಭಿನ್ನ ರೀತಿಯಲ್ಲಿ ನಮ್ಮ ಬೇಡಿಕೆ ನೆನಪಿಸಲಿದ್ದೇವೆ. ಎಂದು ಕನ್ನಡಿಗಾಸ್ ಫೆಡರೇಷನ್ ಸಂಚಾಲಕರ ಹಿದಾಯತ್ ಅಡ್ಡೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News