ಮಲ್ಪೆ: ಟೆಂಪೋ ಢಿಕ್ಕಿ; ಮೀನುಗಾರ ಮೃತ್ಯು
Update: 2022-01-02 22:19 IST
ಮಲ್ಪೆ, ಜ.2: ಗೂಡ್ಸ್ ಟೇಂಪೋ ಢಿಕ್ಕಿ ಹೊಡೆದ ಪರಿಣಾಮ ಮೀನುಗಾರ ರೊಬ್ಬರು ಮೃತಪಟ್ಟ ಘಟನೆ ಡಿ.31ರಂದು ರಾತ್ರಿ ಮಲ್ಪೆ ಬಂದರಿನ ಗೇಟಿನ ಬಳಿ ನಡೆದಿದೆ.
ಮೃತರನ್ನು ಕೋಟತಟ್ಟು ಪಡುಕೆರೆ ನಿವಾಸಿ ಮಹೇಶ(36) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಮಲ್ಪೆ ಬಸ್ ನಿಲ್ದಾಣದ ಕಡೆಯಿಂದ ಮಲ್ಪೆ ಬಂದರಿಗೆ ಬರುತ್ತಿದ್ದ ಟೆಂಪೋ ನಡೆದುಕೊಂಡು ಹೋಗುತ್ತಿದ್ದ ಮಹೇಶ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹೇಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.