×
Ad

ಪ್ರತಿಯೊಬ್ಬರು ಸಮಾಜದ ಅಭ್ಯುದಯಕ್ಕಾಗಿ ತನ್ನ ಕೈಲಾದ ಸೇವೆ ಮಾಡಬೇಕು: ಡಿ.ಆರ್.‌ ರಾಜು

Update: 2022-01-02 22:27 IST

ಕಾರ್ಕಳ: ಯಾವೊಂದು ಪ್ರತಿಫಲಾಪೇಕ್ಷೆ, ಪ್ರಚಾರವಿರದ ಸಮಾಜ ಸೇವೆ ಶ್ರೇಷ್ಠವಾದುದು. ಪ್ರತಿಯೊಬ್ಬರು ಸಮಾಜದ ಅಭ್ಯುದಯಕ್ಕಾಗಿ ತನ್ನ ಕೈಲಾದ ಸೇವೆ ಮಾಡಬೇಕು. ಈ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದರೊಂದಿಗೆ ನೆಮ್ಮದಿ ಕಾಣಲು ಸಾಧ್ಯ ಎಂದು ಸಾಮಾಜಿಕ ಮುಂದಾಳು, ಉದ್ಯಮಿ ಡಿ.ಆರ್.‌ ರಾಜು ಅಭಿಪ್ರಾಯಪಟ್ಟರು.

ಅವರು ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು-ಮುಂಬೈ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ನ್ಯೂಸ್ ಕಾರ್ಕಳ, ಜೆಸಿಐ ಕಾರ್ಕಳ, ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೆಕ್ಲಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಸಹಯೋಗದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, (ಅಂಧತ್ವ ವಿಭಾಗ) ಉಡುಪಿ ಆಶ್ರಯದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಗುರುತಿಸಿದವರಿಗೆ ಕುಕ್ಕುಂದೂರು ಟಪ್ಪಾಲು ಶಾಲೆಯಲ್ಲಿ ಕನ್ನಡಕ ವಿತರಿಸಿ ಮಾತನಾಡಿದರು.

ಶಿರ್ಡಿ ಸಾಯಿಬಾಬ ಮಂದಿರದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್, ಶಾಲಾ ಆಡಳಿತ ಮಂಡಳಿ ಸಂಚಾಲಕ ರಾಜೇಂದ್ರ ಕುಮಾರ್ ಬಲ್ಲಾಳ್‌, ಉದ್ಯಮಿ ಕಮಲಾಕ್ಷ ನಾಯಕ್, ಶಾಂತೇರಿ ಕಾಮಾಕ್ಷಿ, ಉದ್ಯಮಿ ತ್ರಿವಿಕ್ರಮ ಕಿಣಿ, ಪ್ರಭಾಕರ ಬಂಗೇರ, ಗ್ರಾ.ಪಂ. ಉಪಾಧ್ಯಕ್ಷ ಅನಿಲ್‌ ಪೂಜಾರಿ, ಸದಸ್ಯರಾದ ರಾಜೇಶ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಕ್ಕುಂದೂರು ಫ್ರೆಂಡ್ಸ್‌ ನ ಅಧ್ಯಕ್ಷ ದಿನೇಶ್‌ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

62 ಮಂದಿಗೆ ಉಚಿತ ಕನ್ನಡಕ – ಡಿ.ಆರ್.‌ ರಾಜು ಪ್ರಾಯೋಜಕತ್ವ ಶಿಬಿರದಲ್ಲಿ ಗುರುತಿಸಿದ 62 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಡಿ.ಆರ್. ರಾಜು ಅವರು ಕನ್ನಡಕದ ಪ್ರಾಯೋಜಕತ್ವ ನೀಡಿದ್ದರು. ಶಿಬಿರದಲ್ಲಿ 134 ಮಂದಿಗೆ ಕಣ್ಣಿನ ತಪಾಪಣೆ, ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ನಡೆಸಲಾಗಿತ್ತು. 9 ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದು, ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಶಿಬಿರ ಆಯೋಜಕರು ತಿಳಿಸಿದರು. ಪ್ರಸನ್ನ ಕುಕ್ಕುಂದೂರು ಸ್ವಾಗತಿಸಿ, ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News