ದಕ್ಷಿಣ ಆಫ್ರಿಕಾದ ಸಂಸತ್‌ ನಲ್ಲಿ ಬೆಂಕಿ ದುರಂತ

Update: 2022-01-02 18:40 GMT

ಕೇಪ್ಟೌನ್, ಜ.2: ದಕ್ಷಿಣ ಆಫ್ರಿಕಾದ ಸಂಸತ್ಭವನದಲ್ಲಿ ರವಿವಾರ ಬೆಂಕಿ ಅನಾಹುತ ಸಂಭವಿಸಿದ್ದು ಅಗ್ನಿಶಾಮಕ ದಳದ ನಿರಂತರ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ‌

ನ್ಯಾಷನಲ್ ಅಸೆಂಬ್ಲಿ ಕೊಠಡಿ ಹೊರತುಪಡಿಸಿ ಇತರೆಡೆ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಬೆಂಕಿಯ ದುರಂತದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಲೋಕೋಪಯೋಗಿ ಮತ್ತು ಮೂಲಸೌಕರ್ಯ ಇಲಾಖೆಯ ಸಚಿವೆ ಪೆಟ್ರೀಷಿಯಾ ಡೆ ಲಿಲ್ ಸುದ್ಧಿಗಾರರಿಗೆ ತಿಳಿಸಿದ್ದಾರೆ. ಹಲವು ಕಟ್ಟಡಗಳಿರುವ ಸಂಸತ್ ಭವನದ ಸಂಕೀರ್ಣದಲ್ಲಿ ಈಗಲೂ ದಟ್ಟ ಹೊಗೆ ಹೊರಹೊಮ್ಮುತ್ತಿದೆ ಎಂದು ಮೂಲಗಳು ಹೇಳಿವೆ. ಸಂಸತ್ಭವನದ ಕಚೇರಿ ಪ್ರದೇಶದಲ್ಲಿ ಬೆಂಕಿ ಆರಂಭಗೊಂಡಿದ್ದು ಕ್ರಮೇಣ ಇತರೆಡೆ ಹಬ್ಬಿದೆ ಎಂದು ಕೇಪ್ಟೌನ್ನ ಭದ್ರತೆ ಮತ್ತು ಸುರಕ್ಷತೆಯ ಹೊಣೆ ಹೊತ್ತಿರುವ ಮೇಯರ್ ಸಮಿತಿಯ ಸದಸ್ಯ ಜೀನ್ಪಿಯರೆ ಸ್ಮಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News