ದಕ್ಷಿಣ ಆಫ್ರಿಕಾ ವಿರುದ್ದ ದ್ವಿತೀಯ ಟೆಸ್ಟ್ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್, ರಾಹುಲ್ ಗೆ ನಾಯಕತ್ವ ಹೊಣೆ

Update: 2022-01-03 10:17 GMT

ಜೋಹಾನ್ಸ್‌ಬರ್ಗ್: ಬೆನ್ನುಮೂಳೆಯ ಸೆಳೆತದಿಂದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯ ಅರಂಭಕ್ಕೆ ಸ್ವಲ್ಪ ಮೊದಲು ಹೊರಗುಳಿದಿದ್ದು ನಿರ್ಣಾಯಕ ಪಂದ್ಯದಲ್ಲಿ ಕೆ.ಎಲ್. ರಾಹುಲ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಹೊಣೆ ವಹಿಸಿಕೊಂಡಿದ್ದಾರೆ.

ಜನವರಿ 11 ರಿಂದ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್‌ಗೆ ಕೊಹ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಟಾಸ್‌ ವೇಳೆ  ರಾಹುಲ್ ಹೇಳಿದರು.

“ದುರದೃಷ್ಟವಶಾತ್ ವಿರಾಟ್‌ ಬೆನ್ನುಮೂಳೆಯ ಸೆಳೆತದಿಂದ ಬಳಲುತ್ತಿದ್ದಾರೆ. ಮುಂದಿನ ಟೆಸ್ಟ್‌ಗೆ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತೇವೆ’’ ಎಂದು ಟಾಸ್‌ನಲ್ಲಿ ಕೊಹ್ಲಿ ಗೈರುಹಾಜರಾಗಿರುವ ಬಗ್ಗೆ ಕೇಳಿದಾಗ ರಾಹುಲ್ ಹೇಳಿದರು.

ಕೊಹ್ಲಿ ಬದಲಿಗೆ ಆಲ್‌ರೌಂಡರ್ ಹನುಮ ವಿಹಾರಿ ಆಡುವ 11ರ ಬಳಗಕ್ಕೆ ಬಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರನ್ನು ಎರಡನೇ ಟೆಸ್ಟ್‌ಗೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಹೊಟ್ಟೆನೋವಿನ ಕಾರಣ ಶ್ರೇಯಸ್ ಅಯ್ಯರ್ ಆಯ್ಕೆಯಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News