ಅಟಲ್ ಶ್ರೇಣಿಕರಣದ ಸ್ವಯಂ ಹಣಕಾಸು ವಿವಿ ಪಟ್ಟಿಯಲ್ಲಿ ಯೆನೆಪೊಯ ವಿವಿಗೆ ಅತ್ಯುತ್ತಮ ಸ್ಥಾನ
Update: 2022-01-03 20:20 IST
ಹೊಸದಿಲ್ಲಿ, ಜ.3: ಕೇಂದ್ರ ಸರಕಾರ ಬಿಡುಗಡೆ ಮಾಡಿದ ನಾವೀನ್ಯತೆ ಸಾಧನೆಗಳಲ್ಲಿ ಸಂಸ್ಥೆಗಳ ಅಟಲ್ ಶ್ರೇಣಿಕರಣದ ಖಾಸಗಿ ಅಥವಾ ಸ್ವಯಂ ಹಣಕಾಸು ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾನಿಲಯ ಅತ್ಯುತ್ತಮ ಸ್ಥಾನ (ಶ್ರೆಣಿ 11 - 46ರ ನಡುವೆ) ಗಳಿಸಿಕೊಂಡಿದೆ.
ಅಟಲ್ ರ‍್ಯಾಂಕಿಂಗ್ ಆಫ್ ಇನ್ನೋವೇಶನ್ ಎಚೀವ್‌ಮೆಂಟ್ ಸಂಸ್ಥೆಯು ಪ್ರಪಂಚದ ಅತ್ಯಂತ ನವೀನ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳನ್ನು ಶ್ರೇಣೀಕರಿಸಲು ಜಾಗತಿಕವಾಗಿ ಸಾಮಾನ್ಯವಾಗಿ ಬಳಸುವ ಎಲ್ಲಾ ಪ್ರಮುಖ ಸೂಚಕಗಳನ್ನು ಎಆರ್‌ಐಐಎ ಪರಿಗಣಿಸುತ್ತದೆ.
2021ರಲ್ಲಿ ವಿವಿಧ ವರ್ಗಗಳಡಿ 3,551 ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಶ್ವವಿದ್ಯಾನಿಲಯಗಳಿಗೆ 9 ನಿಯತಾಂಕಗಳು ಮತ್ತು 55 ಉಪ ನಿಯತಾಂಕಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿತ್ತು.
///