×
Ad

ಕೆಲಸಕ್ಕೆ ತೆರಳಿದ ಯುವಕ ನಾಪತ್ತೆ

Update: 2022-01-03 22:19 IST

ಉಡುಪಿ, ಜ.1:ಮಣಿಪಾಲದ ಎಂಐಟಿ ಫುಡ್‌ಕೋರ್ಟ್-2ರಲ್ಲಿ ಕೆಲಸ ಮಾಡಿಕೊಂಡಿದ್ದ, ಚೇರ್ಕಾಡಿ ಗ್ರಾಮದ ಸೂರೆಬೆಟ್ಟು ನಿವಾಸಿ ಮುಕುಂದ ನಾಯ್ಕಾ (36) ಎಂಬ ಯುವಕ ಡಿಸೆಂಬರ್ 18ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

4 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಮರಾಠಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೋಲಿಸ್ ಠಾಣೆ ದೂ.ಸಂಖ್ಯೆ: 0820-2570328, ಮೊ.ನಂ: 9480805475 ಅಥವಾ 9480805448 ಅನ್ನು ಸಂಪರ್ಕಿಸುವಂತೆ ಮಣಿಪಾಲ ಪೋಲಿಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News