×
Ad

ಸುರತ್ಕಲ್ ರೇಂಜ್ ‘ಮುಸಾಬಖಾ 2ಕೆ21-22’ ಚಾಂಪಿಯನ್ ಶಿಪ್

Update: 2022-01-03 23:09 IST

ಸುರತ್ಕಲ್, ಜ. 3: ಸುರತ್ಕಲ್ ರೇಂಜ್ ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ‘ಮುಸಾಬಖಾ-2ಕೆ21-22’ ಸಮಾರಂಭವು ರವಿ ವಾರ ಚೊಕ್ಕಬೆಟ್ಟುವಿನಲ್ಲಿ ನಡೆಯಿತು.

ಸಾಂಸ್ಕೃತಿಕ ಕಲಾ ಸ್ಪರ್ಧೆಯನ್ನು ಚೊಕ್ಕಬೆಟ್ಟು ಮಸೀದಿ ಅಧ್ಯಕ್ಷ ಟಿ. ಮುಹಮ್ಮದ್ ಬಶೀರ್ ಅವರು ಉದ್ಘಾಟಿಸಿದರು.

ಕಲಾ ಸ್ಪರ್ಧೆಯಲ್ಲಿ ಸುರತ್ಕಲ್ ರೇಂಜ್‌ಗೆ ಒಳಪಟ್ಟ 300 ವಿದ್ಯಾರ್ಥಿಗಳು ಭಾಗವಹಿಸಿದದ್ದರು. ಕಿಡ್ಡೀಸ್, ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್ ಹೀಗೆ ಐದು ಹಂತದಲ್ಲಿ ಸ್ಪರ್ಧೆ ನಡೆಯಿತು. ಕೊನೆಯಲ್ಲಿ ಅಲ್ ಮದರಸತು್ ಅಝೀಝಿಯಾ ಚೊಕ್ಕಬೆಟ್ಟು ಮದಸರವು ಚಾಂಪಿಯನ್ ಶಿಪ್ ಪಟ್ಟವನ್ನು ಮುಡಿಗೇರಿಸಕೊಂಡಿತು. ಇಡ್ಯಾ ಮದರಸವು ರನ್ನರ್ ಅಪ್ ಸ್ಥಾನವನ್ನು ಪಡೆಯಿತು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಎಸ್‌ವೈಎಸ್ ಸಂಚಾಲಕ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಪ್ರಸಕ್ತ ಸನ್ನಿವೇಶದಲ್ಲಿ ವಿದಾ್ಯರ್ಥಿಗಳಿಗೆ ಸಂಸ್ಕಾರ ಪೂರ್ಣ ಪರಿಸರಸಿಗದೇ ಇರುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಪರಿಸರದಲ್ಲಿ ಅನಾಗರಿಕ ವರ್ತನೆ ಮತ್ತು ಅಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ಕಂಡು ಬರುವಾಗ ಮಕ್ಕಳಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಉತ್ತಮ ಪರಿ ರದ ಸೃಷ್ಟಿಸುವುದು ಸಮಾಜದ ಎಲ್ಲರ ಜವಾಬ್ದಾರಿ ಎಂದು ನುಡಿದರು.

ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ರೇಂಜ್ ಮ್ಯಾನೇಜ್‌ಮೆಂಟ್ ಅಧ್ಯ ಎ.ಕೆ. ಅಬ್ದುಲ್ ಖಾದರ್ ಜೀಲಾನಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶರೀಫ್ ಹೈತಮಿ ,ಹನೀಫ್ ಮುಸ್ಲಿಯಾರ್ ಮುಫತ್ತಿಸ್, ಅಬೂಬಕರ್ ಮದನಿ, ಸಿರಾಜುದ್ದೀನ್ ಫೈಝಿ, ದಾವೂದ್ ಹನೀಫಿ ,ನಾಸಿರ್ ಮುಸ್ಲಿಯಾರ್ ಬೆಳ್ಳೂರು, ಜಲೀಲ್ ಫೈಝಿ ಇಡ್ಯಾ, ಅಬ್ದುಲ್ಲಾ ದಾರಿಮಿ ಮುಲ್ಕಿ, ಮುಸ್ತಫಾ ಅಝ್ಹರಿ , ಆಸಿಫ್ ಯಮಾನಿ ಚೊಕ್ಕಬೆಟ್ಟು, ಹನೀಫ್ ದಾರಿಮಿ ಅಂಕೋಲ, ಇಮ್ರಾನ್ ದಾರಿಮಿ ಕೊಲ್ನಾಡು, ಚೊಕ್ಕಬೆಟ್ಟು ಮಸೀದಿಯ ಪ್ರ. ಕಾರ್ಯದರ್ಶಿ ಶಿಹಾಬುದ್ದೀನ್ , ಆಸಿಫ್ ಚೊಕ್ಕಬೆಟ್ಟು, ಅಝೀಝ್ ಚೊಕ್ಕಬೆಟ್ಟು, ನೂರು ಮುಹಮ್ಮದ್ ಚೊಕ್ಕಬೆಟ್ಟು, ಎಸ್ ವೈ ಎಸ್ ಅಧ್ಯಕ್ಷ ಮುಹಮ್ಮದ್, ಅಬ್ಬಾಸ್ ಎನ್‌ಎಮ್‌ಪಿಟಿ, ಬಶೀರ್ ಚೊಕ್ಕಬೆಟ್ಟು, ಅಝರುದ್ದೀನ್ ಚೊಕ್ಕಬೆಟ್ಟು, ಚೆರಿಯೊನ್ ಚೊಕ್ಕಬೆಟ್ಟು, ಶೌಕತ್ ಚೊಕ್ಕಬೆಟ್ಟು, ಸಯ್ಯದ್ ಇಬ್ರಾಹಿಂ ಚೊಕ್ಕಬೆಟ್ಟು, ಹಸನ್ ಶಾಮಿಯಾನ, ಮುಬೀನ್ ಕೊಳ್ನಾಡು, ಹನೀಫ್ ಇಡ್ಯಾ, ಇಬ್ರಾಹೀಮ್ ಬೊಳ್ಳೂರು, ಮುಹಮ್ಮದ್ ಹಳೆಯಂಗಡಿ, ಇಮ್ತಿಯಾಝ್ ಇಡ್ಯಾ, ಅಬೂಬಕರ್ ಇಡ್ಯಾ, ಇಲ್ಯಾಸ್ ಇಡ್ಯಾ, ಸುಲೈಮಾನ್ ಬೊಳ್ಳೂರು, ರಫೀಕ್ ಚೊಕ್ಕಬೆಟ್ಟು, ಝಫ್ರುಲ್ಲಾ ಕೃಷ್ಣಾಪುರ, ಕಮಾಲ್ ಚೊಕ್ಕಬೆಟ್ಟು, ಝೈನುದ್ದೀನ್ ಚೊಕ್ಕಬೆಟ್ಟು ಇಮ್ರಾನ್ ಚೊಕ್ಕಬೆಟ್ಟು, ಇಲ್ಯಾಸ್ ಸೂರಿಂಜೆ, ಝೈನು ಬೊಲ್ಲೂರು , ಹಮೀದ್ ಸೂರಿಂಜೆ, ಹಮೀದ್ ಹಾಜಿ ಚೊಕ್ಕಬೆಟ್ಟು, ಅಬ್ಬಾಸ್ ಮುಸ್ಲಿಯಾರ್ ಕೃಷ್ಣಾಪುರ, ಹನೀಫ್ ಕೃಷ್ಣಾಪುರ, ಮುಹಮ್ಮದ್ ಅಲಿ ತೋಟ, ಸುರತ್ಕಲ್ ರೇಂಜ್ ಖತೀಬರು ಮತ್ತು ಮುಅಲ್ಲಿಮ್ ಹಾಗು ಮೇನೇಜ್ಮೆಂಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರೇಂಜ್ ಅಧ್ಯಕ್ಷ ಅಬ್ದುಲ್ ರಝಾಕ್ ಅಝ್ಹರಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಗಲಿದ ಸಮಸ್ತ ನಾಯಕರಿಗೆ ತಹ್ಲೀಲ್ ಮತ್ತು ಪ್ರತ್ಯೇಕ ಪ್ರಾರ್ಥನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News