ತೈವಾನ್‌ನಲ್ಲಿ 6.2 ತೀವ್ರತೆಯ ಭೂಕಂಪನ

Update: 2022-01-03 17:39 GMT

ತೈಪೆ, ಜ.3: ಸೋಮವಾರ ಸಂಜೆ ತೈವಾನ್‌ನ ಪೂರ್ವ ಕರಾವಳಿಯಲ್ಲಿ 6.2 ಡಿಗ್ರಿ ಸೆಲ್ಶಿಯಸ್ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಕೇಂದ್ರ ಹವಾಮಾನ ವಿಭಾಗ ವರದಿ ಮಾಡಿದೆ.

ಭೂಕಂಪವು ಕರಾವಳಿ ತೀರದ ಹಾಲಿಯನ್ ನಗರದ ಪೂರ್ವದ 56 ಕಿ.ಮೀ ದೂರದಲ್ಲಿ ಭೂಗರ್ಭದ 19.4 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಸುಮಾರು 20 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದ ಕೆಲವೆಡೆ ಬಹುಮಹಡಿ ಕಟ್ಟಡಗಳು ನಡುಗಿದ ಅನುಭವವಾಗಿದ್ದು ಜನ ಭೀತಿಯಿಂದ ಹೊರಗೋಡಿ ಬಂದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಜನಪ್ರಿಯ ಪ್ರವಾಸೀ ತಾಣವಾಗಿರುವ ಹಾಲಿಯನ್ ನಗರದಲ್ಲಿ 2018ರಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 17 ಮಂದಿ ಮೃತಪಟ್ಟು ಸುಮಾರು 300 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News