ವಿಕಲಚೇತನರ ರಿಯಾಯಿತಿ ಬಸ್ ಪಾಸು; ಫೆ.28ರವರೆಗೆ ಮಾನ್ಯ
Update: 2022-01-04 20:00 IST
ಉಡುಪಿ, ಜ.4: 2021ನೇ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ, ವಿಕಲಚೇತನರ ಪ್ರಯಾಣಿ ಕರಿಗೆ ತಮ್ಮ ವಾಸಸ್ಥಳ ದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ವಿತರಿಸಲಾದ ಬಸ್ಸು ಪಾಸುಗಳ ಅವಧಿಯನ್ನು ಡಿ.31ರ ಬದಲು ಫೆ.28ರವರೆಗೆ ಮಾನ್ಯ ಮಾಡಲಾಗುತ್ತದೆ.
ಈ ಪಾಸುಗಳು ಡಿ.31ಕ್ಕೆ ಮುಕ್ತಾಯಗೊಂಡಿದ್ದು, 2022ನೇ ಸಾಲಿನ ಈ ಬಸ್ಸು ಪಾಸುಗಳನ್ನು ಜ.17ರಿಂದ ನವೀಕರಿಸಲು ಕ್ರಮಕೈಗೊಂಡು ಹೊಸ ಪಾಸುಗಳನ್ನು ನೀಡಲಾಗುವುದು. ಹೀಗಾಗಿ ಈಗಿರುವ ಪಾಸುಗಳನ್ನು ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು ಎಂದು ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ ನಲ್ಲಿ ಸೂಕ್ತ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಪಾಸ್‌ನ ಶುಲ್ಕ 660 ರೂ. ನೀಡಿ ಪಾಸುಗಳನ್ನು ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.