×
Ad

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ: ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ

Update: 2022-01-04 20:01 IST

ಉಡುಪಿ, ಜ.4: ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಸುವ ಸಲುವಾಗಿ, 2022ರ ಜನವರಿ 1ಕ್ಕೆ 18 ವರ್ಷ ತುಂಬಿದ ಕೃಷಿಕರು, ಕೃಷಿಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಹ ರಾಗಿದ್ದು, ಕರ್ನಾಟಕ ವ್ಯವಸಾಯೋತ್ನನ್ನ ಮಾರುಕಟ್ಟೆ ಸಮಿತಿಗಳಿಗೆ ಸಂಕ್ಷಿಪ್ತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ಧಪಡಿಸಲು ಆಯಾಯ ತಾಲೂಕು ತಹಶೀಲ್ದಾರರನ್ನು ಅಧಿಕೃತ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೃಷಿಕ ಮತದಾರರ ಪಟ್ಟಿಗಳನ್ನು ಪಹಣಿ ಪತ್ರಿಕೆಯ ಆಧಾರದಲ್ಲಿ ತಯಾರಿಸಲು ಜನವರಿ 17 ಕೊನೆಯ ದಿನವಾಗಿದ್ದು, ಕೃಷಿಕ ಮತದಾರರ ಪಟ್ಟಿಯ ಕರಡು ಪ್ರಕಟಣೆಯನ್ನು ಜನವರಿ 18ರಂದು ಪ್ರಕಟಿಸಿ, ಜನವರಿ 18ರಿಂದ ಫೆಬ್ರವರಿ 2ರವರೆಗೆ ಮತದಾರರ ಕರಡು ಪಟ್ಟಿ ಗಳಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ಫೆಬ್ರವರಿ 3ರಿಂದ 6ರವರೆಗೆ ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿ, ತಿದ್ದುಪಡಿ ಮಾಡಿ, ಫೆ. 7 ರಂದು ಕೃಷಿಕ ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯನ್ನು ಹೊರಡಿಸ ಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News